ಸರಣಿ ಅತ್ಯಾಚಾರಿ ಬಂಧನ: ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಮತ್ತಷ್ಟು ಸಂತ್ರಸ್ತರು

600ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಇದೀಗ ಕಂಬಿ ಹಿಂದೆ ಕುಳಿತಿರುವ ದೆಹಲಿ ಸರಣಿ ಅತ್ಯಾಚಾರಿ ವಿರುದ್ಧ ಪ್ರಕರಣ ದಾಖಲಿಸಲು ಇದೀಗ ಮತ್ತಷ್ಟು ಸಂತ್ರಸ್ತರು ಮುಂದಾಗಿದ್ದಾರೆ...
ಬಂಧಿತ ಆರೋಪಿ
ಬಂಧಿತ ಆರೋಪಿ

ನವದೆಹಲಿ: 600ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಇದೀಗ ಕಂಬಿ ಹಿಂದೆ ಕುಳಿತಿರುವ ದೆಹಲಿ ಸರಣಿ ಅತ್ಯಾಚಾರಿ ವಿರುದ್ಧ ಪ್ರಕರಣ ದಾಖಲಿಸಲು ಇದೀಗ ಮತ್ತಷ್ಟು ಸಂತ್ರಸ್ತರು ಮುಂದಾಗಿದ್ದಾರೆ.

ಅಪ್ರಾಪ್ತ ಬಾಲಕಿಯನ್ನೇ ತನ್ನ ಗುರಿ ಮಾಡುತ್ತಿದ್ದ ಆರೋಪಿ ಕಳೆದ 13 ವರ್ಷಗಳಿಂದಲೂ 600ಕ್ಕೂ ಹೆಚ್ಚು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿದ್ದ. ಶಿಶುಕಾಮಿಯಾಗಿದ್ದ ಸುನಿಲ್ ರಸ್ತೋಗಿಯನ್ನು ನಿನ್ನೆಯಷ್ಟೇ ದೆಹಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದರು.

ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದ ಬೆನ್ನಲ್ಲೇ ಈತನಿಂಗ ದೌರ್ಜನ್ಯಕ್ಕೊಳಗಾದ ಬಾಲಕಿಯರ ಪೊಲೀಸರು ದೂರು ದಾಖಲಿಸಲು ಮುಂದಾಗಿದ್ದಾರೆ.

ಅತ್ಯಾಚಾರಕ್ಕೊಳಗಾದ ಬಾಲಕಿಯರ ಪೋಷಕರು ಹೇಳಿಕೆಗಳನ್ನು ನೀಡಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಗುರಿಯಾಗಿರಿಸಿಕೊಳ್ಳುತ್ತಿದ್ದ ಈತ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಲಕಿಯರನ್ನು ಅಪಹರಣ ಮಾಡುತ್ತಿದ್ದ. ಶಾಲೆಯ ಸುತ್ತಮುತ್ತಲು ಓಡಾಡುತ್ತಿದ್ದ ಈತ ಮಧ್ಯಾಹ್ನ ಸಮಯದಲ್ಲಿ ಒಂಟಿಯಾಗಿರುತ್ತಿದ್ದ ಬಾಲಕಿಯರ ಬಳಿ ಹೋಗಿ ತಪ್ಪು ಮಾಹಿತಿ ಕರೆದೊಯ್ಯುತ್ತಿದ್ದ. ಆದರೆ, ಈ ಬಗ್ಗೆ ಯಾರೊಬ್ಬರು ಪೊಲೀಸರಿಗೆ ಮಾಹಿತಿ ನೀಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕಳೆದ ತಿಂಗಳು ಆರೋಪಿ ನನ್ನ 11 ವರ್ಷದ ಮಗಳೊಂದಿಗೆ ಮಾತನಾಡಿದ್ದ. ನನ್ನ ಮಗಳು ಈ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದಳು. ಬಂಧಿತ ವ್ಯಕ್ತಿ ಮಗಳ ಬಳಿ ಆಕೆಯ ಹೆಸರ್ನು ಕೇಳಿದ್ದ. ನಂತರ ಕೆಲ ಬಟ್ಟೆಗಳನ್ನು ಹೊಲಿಗೆ ಹಾಕಲು ಕೊಟ್ಟಿದ್ದೇನೆ. ಜೊತೆಗೆ ಬರುವಂತೆ ತಿಳಿಸಿದ್ದ. ಈ ವೇಳೆ ಆತನ ಜೊತೆಯಲ್ಲಿ ಹೋದಾಗ ಕತ್ತಲೆಯ ಕೊಠಡಿಯೊಂದಕ್ಕೆ ಕರೆದೊಯ್ದಿದ್ದ. ನಂತರ ನಾನು ಓಡಿ ಬಂದಿದ್ದೆ ಎಂದು ನನ್ನ ಮಗಳು ಹೇಳಿಕೊಂಡಿದ್ದಳು. ಇದೀಗ ನಾನು ಅಧಿಕೃತವಾಗಿ ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದೇನೆಂದು ಸುರೇಶ್ ಎಂಬುವವರು ಹೇಳಿಕೊಂಡಿದ್ದಾರೆ.

ಈತ ಸಾಕಷ್ಟು ಬಾಲಕಿಯರ ಮೇಲೆ ದೌರ್ಜನ್ಯವೆಸಗಿದ್ದಾನೆ. ಆದರೆ, ಎಷ್ಟೋ ಮಂದಿ ದೂರು ದಾಖಲಿಸಲು ಮುಂದೆ ಬಂದಿಲ್ಲ. ಸಮಾಜದ ಭಯದಿಂದಾಗಿ ಅವರು ಮುಂದೆ ಬಂದಿರಲಿಲ್ಲ. ಇದೀಗ ಆರೋಪಿ ಬಂಧನಕ್ಕೊಳಪಡಿಸಿರುವುದರಿಂದ ಜನರು ದೂರು ದಾಖಲಿಸಲು ಮುಂದೆ ಬರುತ್ತಿದ್ದಾರೆಂದು ಸುರೇಶ್ ಅವರು ಹೇಳಿದ್ದಾರೆ.

ನನ್ನ ಮಗಳು ಮನೆಗೆ ವಸ್ತುವೊಂದನ್ನು ತರಲೆಂದು ಅಂಗಡಿಗೆ ಹೋಗಿದ್ದಳು. ಈ ವೇಳೆ ಆರೋಪಿ ನಿನ್ನ ತಂದೆ ಬಟ್ಟೆ ಹೊಲಿಯಲು ಕೊಟ್ಟಿದ್ದು, ಬಟ್ಟೆಯನ್ನು ಕೊಡುತ್ತೇನೆಂದು ಹೇಳಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಕೊಠಡಿಯೊಂದರ ಬಳಿ ಹೋಗುತ್ತಿದ್ದಂತೆ ಆತನ ಬಳಿ ಚಾಕು ಇರುವುದನ್ನು ಮಗಳು ಗಮನಿಸಿದ್ದಾಳೆ. ಕೂಡಲೇ ಸ್ಥಳದಿಂದ ಓಡಿ ಬಂದಿದ್ದಾಳೆ. ಘಟನೆ ಬಳಿಕ ಹೆದರಿದ್ದ ಮಗಳು ನಮ್ಮ ಹೇಳೆ ನಡೆದ ವಿಚಾರವನ್ನು ಹೇಳಿಕೊಂಡಿದ್ದಳು. ನಂತರ ನಾವು ಆಕೆಯನ್ನು ಒಂಟಿಯಾಗಿ ಎಲ್ಲಿಯೂ ಬಿಡುತ್ತಿರಲಿಲ್ಲ. ಘಟನೆ ನಂತರ ನಾವು ಯಾವುದೇ ದೂರನ್ನು ದಾಖಲಿಸಿರಲಿಲ್ಲ ಎಂದು ಬಾಲಕಿಯ ತಾಯಿ ಸುನಿತಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com