ರಾಜಸ್ಥಾನ: ಹಳಿ ತಪ್ಪಿದ ರಾಣಿಖೇತ್ ಎಕ್ಸ್ ಪ್ರೆಸ್ ನ 10 ಬೋಗಿಗಳು

ರಾಜಸ್ಥಾನದಲ್ಲಿ ರಾಣಿಖೇತ್ ಎಕ್ಸ್ ಪ್ರೆಸ್ ನ 10 ಬೋಗಿಗಳು ಹಳಿ ತಪ್ಪಿವೆ.
ಹಳಿ ತಪ್ಪಿದ ರಾಣಿಖೇತ್ ಎಕ್ಸ್ ಪ್ರೆಸ್ ನ ಬೋಗಿಗಳು
ಹಳಿ ತಪ್ಪಿದ ರಾಣಿಖೇತ್ ಎಕ್ಸ್ ಪ್ರೆಸ್ ನ ಬೋಗಿಗಳು
ಜೈಪುರ: ರಾಜಸ್ಥಾನದಲ್ಲಿ ರಾಣಿಖೇತ್ ಎಕ್ಸ್ ಪ್ರೆಸ್ ನ 10 ಬೋಗಿಗಳು ಹಳಿ ತಪ್ಪಿವೆ. 
ಥಯತ್ ಹಮೀರಾ- ಜೈಸಲ್ಮೇರ್ ನಡುವೆ ಸಂಚರಿಸುತ್ತಿದ್ದ ವೇಳೆ ರೈಲಿನ 10 ಬೋಗಿಗಳು ರಾತ್ರಿ 11:16 ರ ವೇಳೆಗೆ ಹಳಿ ತಪ್ಪಿವೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವಾಯುವ್ಯ ರೈಲ್ವೆ ಇಲಾಖೆಯ ವಕ್ತಾರರಾದ ತರುಣ್ ಜೈನ್ ಹೇಳಿದ್ದಾರೆ.
ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹಳಿತಪ್ಪುವುದಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ರೈಲಿನ ಬೋಗಿಗಳು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ವಿಶೇಷ ರೈಲಿನ ಮೂಲಕ ಪ್ರಯಾಣ ಮುಂದುವರೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com