ಜಲ್ಲಿಕಟ್ಟು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ನಕ್ಸಲ್, ಜಿಹಾದಿ ಮತ್ತು ಪೊರ್ಕಿಗಳು ಕಾರಣ: ಸ್ವಾಮಿ

ಚೆನ್ನೈನ ಮರಿನಾ ಬೀಚ್ ನಲ್ಲಿ ಶಾಂತವಾಗಿ ನಡೆಯುತ್ತಿದ್ದ ಜಲ್ಲಿಕಟ್ಟು ಪ್ರತಿಭಟನೆ ಉಗ್ರರೂಪ ತಾಳಲು ನಕ್ಸಲರು, ಜಿಹಾದಿಗಳು ಮತ್ತು ಪೋರ್ಕಿಗಳು ಕಾರಣ ಎಂದು ಬಿಜೆಪಿ...
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
Updated on: 
ನವದೆಹಲಿ: ಚೆನ್ನೈನ ಮರಿನಾ ಬೀಚ್ ನಲ್ಲಿ ಶಾಂತವಾಗಿ ನಡೆಯುತ್ತಿದ್ದ ಜಲ್ಲಿಕಟ್ಟು ಪ್ರತಿಭಟನೆ ಉಗ್ರರೂಪ ತಾಳಲು ನಕ್ಸಲರು, ಜಿಹಾದಿಗಳು ಮತ್ತು ಪೊರ್ಕಿಗಳು ಕಾರಣ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದು ಅಲ್ಲದೇ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. 
ಜಲ್ಲಿಕಟ್ಟು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಹಿನ್ನೆಲೆ ಪ್ರತಿಭಟನೆಯನ್ನು ನಿಯಂತ್ರಿಸಲು ರಾಜ್ಯಕ್ಕೆ ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಸೇನೆಯನ್ನು ಕಳುಹಿಸಿ, ರಾಜ್ಯದಲ್ಲಿ ನೆಲೆಯೂರಿರುವ ನಕ್ಸಲರು, ಜಿಹಾದಿಗಳು ಮತ್ತು ಪಾಕಿಸ್ತಾನೀಯರ ಹುಟ್ಟಡಗಿಸಲು ಈಗಿಂದಲೇ ಭದ್ರತಾ ಕಾರ್ಯಾಚರಣೆ ನಡೆಸಬೇಕು ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ತಮಿಳುನಾಡು ಜನತೆಯ ಆಗ್ರಹವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ಬಳಿಕವೂ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆದರೆ ಅದು ನಿಜಕ್ಕೂ ಅರ್ಥಹೀನ. ಈ ಹಿನ್ನಲೆಯಲ್ಲಿ ಪೊಲೀಸರು ಕೈಗೊಂಡಿರುವ ಕ್ರಮವನ್ನು ನಾನು ಸ್ವಾಗತಿಸುತ್ತೇನೆಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com