ರಿಲಯನ್ಸ್ ಮುಖ್ಯಸ್ಥೆ ನೀತಾ ಅಂಬಾನಿಗೆ ಪ್ರತಿಷ್ಟಿತ "ದಿ ಮೆಟ್" ಗೌರವ

ರಿಲಯನ್ಸ್ ಫೌಂಡೇಶನ್ಸ್ ಸಂಸ್ಥೆಯ ಮುಖ್ಯಸ್ಥೆ ನೀತಾ ಅಂಬಾನಿ ಅವರು ನ್ಯೂಯಾರ್ಕ್ ನ ಪ್ರತಿಷ್ಟಿತ ಮ್ಯೂಸಿಯಂ ಆಫ್ ಆರ್ಟ್ (ಮೆಟ್) ಗೌರವಕ್ಕೆ ಪಾತ್ರರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನ್ಯೂಯಾರ್ಕ್: ರಿಲಯನ್ಸ್ ಫೌಂಡೇಶನ್ಸ್ ಸಂಸ್ಥೆಯ ಮುಖ್ಯಸ್ಥೆ ನೀತಾ ಅಂಬಾನಿ ಅವರು ನ್ಯೂಯಾರ್ಕ್ ನ ಪ್ರತಿಷ್ಟಿತ ಮ್ಯೂಸಿಯಂ ಆಫ್ ಆರ್ಟ್ (ಮೆಟ್) ಗೌರವಕ್ಕೆ ಪಾತ್ರರಾಗಿದ್ದಾರೆ.

ಶಿಕ್ಷಣ, ಕ್ರೀಡೆ, ಆರೋಗ್ಯ ಸೇವೆ, ಗ್ರಾಮೀಣಾಭಿವೃದ್ಧಿ, ನಗರೀಕರಣ, ವಿಪತ್ತು ನಿರ್ವಹಣೆ, ಮಹಿಳಾ ಸಬಲೀಕರಣ ಮತ್ತು ಕಲೆ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ನೀತಾ ಆಂಬಾನಿ ಅವರಿಗೆ ಈ  ಗೌರವ  ನೀಡಲಾಗಿದೆ. ಆ ಮೂಲಕ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ  ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ನೀತಾ ಅಂಬಾನಿ ಅವರು  ಪಾತ್ರರಾಗಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನೀತಾ ಆಂಬಾನಿ ಅವರು, "ಭಾರತದ 10 ದಶಲಕ್ಷ ಮಂದಿ ರಿಲಯನ್ಸ್ ಸೇವೆಗಳನ್ನು ಬಳಸುತ್ತಿದ್ದು, ನಗರ/ಗ್ರಾಮೀಣ ಪ್ರದೇಶದ 11 ಸಾವಿರಕ್ಕೂ ಹೆಚ್ಚು ಮಂದಿಯನ್ನು ತಲಪುವಲ್ಲಿ ರಿಲಯನ್ಸ್ ಸಂಸ್ಥೆ  ಯಶಸ್ವಿಯಾಗಿದೆ. ಈ ಗೌರವದಿಂದ ಸುಸ್ಥಿರ ಅಭಿವೃದ್ಧಿ, ಸಬಲೀಕರಣದತ್ತ ನಮ್ಮ ಬದ್ಧತೆಯನ್ನು ಗಟ್ಟಿಗೊಳಿಸಲಿದೆ ಎಂದು ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾಗಿರುವ ನೀತಾ ಅಂಬಾನಿ ಅವರು 2010 ರಿಲಯನ್ಸ್ ಫೌಂಡೇಷನ್ಸ್ ಸಂಸ್ಥೆ ಸ್ಥಾಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com