ತಿರುವನಂತಪುರಂ: ರಷ್ಯಾದ ವ್ಯಕ್ತಿಯೋರ್ವ ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಟ್ಟಡದ ಮೇಲಿಂದ ಹಾರಿ ಸಾವನ್ನಪ್ಪಿದ್ದಾನೆ.
ಅತ್ಯಂತ ಹೆಚ್ಚು ಭದ್ರತೆ ಹೊಂದಿರುವ ವಿಮಾನ ನಿಲ್ದಾಣ ಪ್ರದೇಶದಿಂದ ಹಾರಿ ವ್ಯಕ್ತಿ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ. ಡ್ಯಾನಿ ಎಂಬಾತ ನಿನ್ನೆ ರಾತ್ರಿ 11.35ರ ಸುಮಾರಿಗೆ ಕಟ್ಟಡದಿಂದ ಹಾರಿ ಮೃತಪಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವ್ಯಕ್ತಿ ವಿಮಾನ ಕಟ್ಟಡದ ಮೇಲಿಂದ ಹಾರಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ಡ್ಯಾನಿ ಜನವರಿ 19ರಂದು ನೇಪಾಳದಿಂದ ತನ್ನ ಸ್ನೇಹಿತ ಅಲೆಗ್ಸಾಂಡರ್ ಜೊತೆ ಭಾರತಕ್ಕೆ ಬಂದಿದ್ದ.