ಮುಂಬೈ: ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 21 ಲಕ್ಷ ಮೌಲ್ಯದ ವಿದೇಶಿ ಹಣವನ್ನು ಇಟ್ಟುಕೊಂಡಿದ್ದ ಇಬ್ಬರು ಶ್ರೀಲಂಕಾದ ಪ್ರಜೆಗಳನ್ನು ವಾಯು ಗುಪ್ತಚರ ಘಟಕ ಬಂಧಿಸಿದೆ.
ವಿದೇಶಿ ಹಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕಳೆದು ರಾತ್ರಿ ಬಂಧಿಸಲಾಗಿದೆ. ಕಳೆದ ಜನವರಿಯಿಂದ ಮುಂಬೈನ ವಾಯು ಗುಪ್ತಚರ ಘಟಕ ಸುಮಾರು 80 ಲಕ್ಷ ಮೊತ್ತದ ವಿದೇಶಿ ಹಣವನ್ನು ವಶಪಡಿಸಿಕೊಂಡಿದೆ.
ಜನವರಿ 5ರಂದು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐದು ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿತ್ತು.