ನವದೆಹಲಿ: ನೋಟ್ ಬ್ಯಾನ್ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಎಟಿಎಂ ಹಾಗೂ ಬ್ಯಾಂಕ್ ಗಳಲ್ಲಿ ಹಣ ವಿತ್ ಡ್ರಾಗೆ ಮಿತಿ ಹೇರಿತ್ತು. ಇದೀಗ ಫೆಬ್ರವರಿ 1ರಿಂದ ಎಟಿಎಂ ವಿತ್ ಡ್ರಾ ಮಿತಿಯನ್ನು ಹಿಂಪಡೆದಿದೆ.
ಇನ್ನು ಕರೆಂಟ್ ಅಕೌಂಟ್, ಕ್ಯಾಶ್ ಕ್ರೆಡಿಟ್ ಅಕೌಂಟ್ ಅಥವಾ ಓವರ್ ಡ್ರಾಫ್ಟ್ ಮೇಲೆ ವಿಧಿಸಲಾಗಿದ್ದ ಮಿತಿಯು ತಕ್ಷಣದಿಂದಲೇ ರದ್ದಾಗಲಿದ್ದು, ಉಳಿತಾಯ ಖಾತೆಯ ದಿನಕ್ಕೆ 24 ಸಾವಿರ ರುಪಾಯಿ ಹಣ ಡ್ರಾ ಮಾಡುವ ಮಿತಿಯನ್ನು ಮುಂದುವರೆಸಿದೆ.
ಫೆಬ್ರವರಿ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಯಾವುದೇ ರೀತಿಯ ಮಿತಿ ಇಲ್ಲ. ಒಂದು ವೇಳೆ ಆಯಾ ಬ್ಯಾಂಕ್ ಗಳು ಬಯಸಿದರೆ ಮಿತಿ ಹಾಕಬಹುದು ಎಂದು ಆರ್‌ಬಿಐ ಹೇಳಿದೆ.