ಜಮ್ಮು ಮತ್ತು ಕಾಶ್ಮೀರದಲ್ಲೂ ಜಿಎಸ್ ಟಿ ಜಾರಿ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಶುಕ್ರವಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಶ್ರೀನಗರ: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಶುಕ್ರವಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಸೂದೆ 2017 ಅನ್ನು ಅಂಗೀಕರಿಸಿದ್ದು, ಜಿಎಸ್ ಟಿ ಜಾರಿಗೊಳಿಸಿದ ದೇಶದ ಕೊನೆಯ ರಾಜ್ಯವಾಗಿದೆ.
ಹಣಕಾಸು ಸಚಿವ ಹಸೀಬ್ ದ್ರಾಬು ಅವರು ಮಂಡಿಸಿದ ಜಿಎಸ್ ಟಿ ವಿಧೇಯಕ 2017 ಅನ್ನು ಧ್ವನಿ ಮತದ ಮೂಲಕ ಇಂದು ಅಂಗೀಕರಿಸಲಾಯಿತು.
ಪಿಡಿಪಿ-ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜಿಎಸ್ ಟಿ ಜಾರಿಗೊಳಿಸುವ ಮೂಲಕ ಕಣಿವೆ ರಾಜ್ಯದ ವಿಶೇಷ ಸ್ಥಾನಮಾನಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಕಲಾಪವನ್ನು ಬಹಿಷ್ಕರಿಸಿತ್ತು.
ದೇಶದ ಇತರೆ ಎಲ್ಲಾ ರಾಜ್ಯಗಳು ಜುಲೈ 1ರಿಂದಲೇ ಜಿಎಸ್ ಟಿ ಅನುಷ್ಠಾನಕ್ಕೆ ತಂದರೂ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಜಾರಿಗೆ ತಂದಿರಲಿಲ್ಲ. ರಾಜ್ಯದ ವಿಶೇಷ ಸ್ಥಾನಮಾನ ಮತ್ತು ಪ್ರತ್ಯೇಕ ತೆರಿಗೆ ಅಧಿಕಾರಗಳನ್ನು ಸುರಕ್ಷಿತವಾಗಿಡಲು ರಾಷ್ಟ್ರಪತಿ ಆದೇಶ ನೀಡಿದ್ದು, ಅದನ್ನು ಹಸೀಬ್ ದ್ರಾಬು ಅವರು ಸದನದಲ್ಲಿ ಓದಿ ಹೇಳಿದರು. ಈ ರಾಷ್ಟ್ರಪತಿ ಆದೇಶದಲ್ಲಿ 370ನೇ ವಿಧಿಗೆ ಯಾವುದೇ ತೊಡಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com