ದೆಹಲಿ: ಲೈಂಗಿಕ ಕಾರ್ಯಕರ್ತೆ ಜೊತೆಗೆ ಯುವಕನ ಪ್ರೇಮಾಂಕುರ, ವಿವಾಹವಾಗಲು ನಿರ್ಧಾರ

ಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿ ಎನ್ನುವಂತೆ ಯುವಕನೊಬ್ಬ ಲೈಂಗಿಕ ಕಾರ್ಯಕರ್ತೆಯ ಪ್ರೇಮಪಾಶಕ್ಕೆ ಸಿಲುಕಿ ಆಕೆಯನ್ನೆ ವಿವಾಹವಾಗುವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿ ಎನ್ನುವಂತೆ ಯುವಕನೊಬ್ಬ ಲೈಂಗಿಕ ಕಾರ್ಯಕರ್ತೆಯ ಪ್ರೇಮಪಾಶಕ್ಕೆ ಸಿಲುಕಿ ಆಕೆಯನ್ನೆ ವಿವಾಹವಾಗುವ ನಿರ್ಧಾರ ಮಾಡಿದ್ದಾನೆ.
ಆಕೆ 27 ಮಹಿಳೆ  ಎರಡು ವರ್ಷದ ಹಿಂದೆ ಸದರ್‌ ಬಜಾರ್ ನ ಯುವಕ ಪರಿಚಯವಾದ. ಆಕೆಯನ್ನು ಪ್ರೀತಿಸಿದ ಆತ ಗ್ರಾಹಕನಂತೆ ಆಕೆಯನ್ನು ಭೇಟಿ ಮಾಡುತ್ತಿದ್ದ. 
ನಂತರ ಆಕೆಯಲ್ಲಿ ಪ್ರೇಮಾಂಕುರವಾಗಿ ಆಕೆಯನ್ನು ಮದುವೆಯಾಗ ಬಯಸಿದ. ಆಕೆಯೂ ಒಪ್ಪಿದಳು. ಆದರೆ ಆಕೆಯಿಂದ ಕಸುಬು ಮಾಡಿಸುತ್ತಿದ್ದ  ಮಾಲೀಕರು  ಇದಕ್ಕೆ ವಿರೋಧ ವ್ಯಕ್ತ ಪಡಿಸಿದರು. 
ಈ ಸಂಬಂಧ ದೆಹಲಿ ಮಹಿಳಾ ಆಯೋಗವನ್ನು ಸಂಪರ್ಕಿಸಿದ ಯುವಕ ವಿಷಯ ತಿಳಿಸಿದ. ಅದರಂತೆ ಸ್ಥಳೀಯ ಪೊಲೀಸರು, ಮಹಿಳಾ ಆಯೋಗದ ಸದಸ್ಯರು ಜಿಬಿ ರಸ್ತೆಯ ವೇಶ್ಯಾವಾಟಿಕೆಯ ಅಡ್ಡೆ ಮೇಲೆ ದಾಳಿ ನಡೆಸಿ ಮಹಿಳೆಯನ್ನು ರಕ್ಷಿಸಿದ್ದಾರೆ.  
ನೇಪಾಳ ಮೂಲದ ಮಹಿಳೆ 2015ರ ಭೀಕರ ಭೂಕಂಪದಲ್ಲಿ ಎಲ್ಲವನ್ನೂ ಕಳೆದುಕೊಂಡು, ಹೊಟ್ಟೆಪಾಡಿಗಾಗಿ ದೆಹಲಿಗೆ ಬಂದಿದ್ದಳು. ಯಾರೋ ಆಕೆಯನ್ನು ವೇಶ್ಯಾವಾಟಿಕೆಗೆ ದೂಡಿದ್ದರು.
ಇದೀಗ ಯುವಕನೋರ್ವ ಆಕೆಯನ್ನು ಪ್ರೀತಿಸಿದ್ದು ಮದುವೆಯಾಗಲು ನಿರ್ಧರಿಸಿದ್ದಾನೆ. ಹೊಸ ಜೀವನಕ್ಕೆ ಕಾಲಿಡಲು ಆಕೆ ಕೂಡ ಉತ್ಸುಕಳಾಗಿದ್ದಾಳೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com