1993 ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಖಾದಿರ್ ಅಹ್ಮದ್ ಬಂಧನ!

1993ರ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಖಾದಿರ್ ಅಹ್ಮದ್ ಎಂಬಾತನನ್ನು ಗುಜರಾತ್, ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: 1993ರ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಖಾದಿರ್ ಅಹ್ಮದ್ ಎಂಬಾತನನ್ನು ಗುಜರಾತ್, ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಉತ್ತರ ಪ್ರದೇಶದ ನಜಿಬಾಬಾದ್ ನಲ್ಲಿ ಟಾಡಾ ಪ್ರಕರಣದ ಆರೋಪಿ ಖಾದಿರ್ ಅಹ್ಮದ್ ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಖಾದಿರ್ ಅಹ್ಮದ್ ಇರುವಿಕೆ ಕುರಿತು ಖಚಿತ ಮಾಹಿತಿ ಪಡೆದಿದ್ದ ಗುಜರಾತ್ ಎಟಿಎಸ್  ಅಧಿಕಾರಿಗಳು ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳ ನೆರವು ಪಡೆದು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೇ 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮುಂಬೈ ಟಾಡಾ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿ, ಜೂನ್ 19ರಂದು ಶಿಕ್ಷೆ ಪ್ರಮಾಣ ಪ್ರಕಟಿಸಿತ್ತು. ಮುಂಬೈ ಸರಣಿ ಸ್ಫೋಟಕ್ಕೆ ಉಗ್ರ ಅಬು ಸಲೇಂ ಹಾಗೂ  ಮುಸ್ತಫಾ ಸಂಚು ರೂಪಿಸಿದ್ದ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಫಿರೋಜ್​ ರಷೀದ್​ ಖಾನ್​ ಹಾಗೂ ತಾಹೀರ್ ಮರ್ಚೆಂಟ್​ ಹಾಗೂ  ಮುಸ್ತಫಾ ಸಹೋದರ ಮೊಹಮ್ಮದ್​ ದೋಸ್ಸಾ ಅವರನ್ನು ಕೂಡ ಅಪರಾಧಿ ಎಂದು ಪರಿಗಣಿಸಿತ್ತು.

ಪ್ರಕರಣದ ಆರೋಪಿಯಾಗಿದ್ದ ಮುಸ್ತಫಾ ದೊಸ್ಸಾ ಜೂನ್ 28ರಂದು ಎದೆನೋವಿನಿಂದ ಮುಂಬೈ ಆಸ್ಪತ್ರೆಯನ್ನಿ ಸಾವನ್ನಪ್ಪಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com