ಕಲ್ಲು ತೂರಾಟಗಾರರ ಹಣಿಯಲು ಸುಗಂಧ ದ್ರವ್ಯ ತಯಾರಕರಿಂದ "ದುರ್ಗಂಧದ ಬಾಂಬ್" ತಯಾರಿಕೆ

ಕಾಶ್ಮೀರದಲ್ಲಿ ಮಿತಿ ಮೀರಿರುವ ಕಲ್ಲು ತೂರಾಟಗಾರರನ್ನು ಹಣಿಯಲು ಅತ್ತ ನಮ್ಮ ಸೈನಿಕರು ಹರ ಸಾಹಸ ಪಡುತ್ತಿದ್ದರೆ, ಇತ್ತ ಉತ್ತರ ಪ್ರದೇಶದಲ್ಲಿ ಕೆಲ ವಿಜ್ಞಾನಿಗಳು ಯಾವುದೇ ರೀತಿಯ ದೈಹಿಕ ಹಿಂಸೆಯಲ್ಲದೇ ಕಲ್ಲು ತೂರಾಟಗಾರರನ್ನು ಹಣಿಯುವ ಆವಿಷ್ಕಾರ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕನೌಜ್: ಕಾಶ್ಮೀರದಲ್ಲಿ ಮಿತಿ ಮೀರಿರುವ ಕಲ್ಲು ತೂರಾಟಗಾರರನ್ನು ಹಣಿಯಲು ಅತ್ತ ನಮ್ಮ ಸೈನಿಕರು ಹರ ಸಾಹಸ ಪಡುತ್ತಿದ್ದರೆ, ಇತ್ತ ಉತ್ತರ ಪ್ರದೇಶದಲ್ಲಿ ಕೆಲ ವಿಜ್ಞಾನಿಗಳು ಯಾವುದೇ ರೀತಿಯ ದೈಹಿಕ ಹಿಂಸೆಯಲ್ಲದೇ ಕಲ್ಲು  ತೂರಾಟಗಾರರನ್ನು ಹಣಿಯುವ ಆವಿಷ್ಕಾರ ಮಾಡಿದ್ದಾರೆ.

ವಿಜ್ಞಾನಿಗಳ ಈ ಆವಿಷ್ಕಾರದಿಂದಾಗಿ ಕಲ್ಲು ತೂರಾಟಗಾರರು, ಸೈನಿಕರ ಪ್ರಮೇಯವೇ ಇಲ್ಲದೇ ತಾವೇ ತಾವಾಗಿ ಚದುರಿ ಹೋಗಲಿದ್ದಾರೆ. ಹೌದು ಇಷ್ಟಕ್ಕೂ ಈ ಆವಿಷ್ಕಾರ ಏನು ಎಂದರೆ ಅದೇ "ದುರ್ಗಂಧದ ಬಾಂಬ್"....  ಹೌದು..ಉತ್ತರ ಪ್ರದೇಶದ ಕನೌಜ್ ನಲ್ಲಿರುವ ಪರಿಮಳ ಮತ್ತು ಸುವಾಸನೆ ಅಭಿವೃದ್ಧಿ ಕೇಂದ್ರ (ಎಫ್ಎಫ್ ಡಿಸಿ)ದ ಸುಗಂಧ ದ್ರವ್ಯ ತಯಾರಿಕಾ ವಿಜ್ಞಾನಿಗಳು ದುರ್ಗಂಧದ ಬಾಂಬ್ ಗಳನ್ನು ತಯಾರಿಸಿದ್ದು, ಇವುಗಳನ್ನು ಕಲ್ಲು  ತೂರಾಟಗಾರರ ಮೇಲೆ ಪ್ರಯೋಗಿಸಿದರೆ ಪ್ರತಿಭಟನಾಕಾರರು ತಾವೇ ತಾವಾಗಿ ಆ ಪ್ರದೇಶ ಬಿಟ್ಟು ಓಡಿ ಹೋಗಲಿದ್ದಾರಂತೆ.

ಪ್ರತಿಭಟನಾ ನಿರಚರ ಮೇಲೆ ಇದನ್ನು ಪ್ರಯೋಗಿಸಿದಾಗ ಇವುಗಳು ಸಿಡಿದು ಇದರಲ್ಲಿರುವ ರಾಸಾಯನಿಕ ಸುತ್ತಮುತ್ತಲ ಪ್ರದೇಶದಲ್ಲಿ ಗಬ್ಬು ವಾಸನೆಯನ್ನು ಪಸರಿಸುತ್ತದೆ. ಇದರ ವಾಸನೆಗೆ ಆ ಸ್ಥಳದಲ್ಲಿ ಯಾರೂ ನಿಲ್ಲಲಾಗದೆ  ಚದುರಿ ಓಡಿ ಹೋಗುತ್ತಾರಂತೆ. ಅಷ್ಟರ ಪ್ರಮಾಣದಲ್ಲಿ ಇದು ಅತೀ ಕೆಟ್ಟ ವಾಸನೆಯನ್ನು ಬೀರುತ್ತದೆಯಂತೆ.

ಈ ಮಹತ್ವದ ಕ್ಯಾಪ್ಸುಲ್ ಗಳನ್ನು ಎಫ್ಎಫ್ ಡಿಸಿ ಪ್ರಧಾನ ನಿರ್ದೇಶಕ ಶಕ್ತಿ ವಿನಯ್ ಶುಕ್ಲಾ, ಸಹಾಯಕ ನಿರ್ದೇಶಕ ಎ.ಪಿ. ಸಿಂಗ್ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗಿದ್ದು, ಇವುಗಳಿಂದ ಹೊರಹೊಮ್ಮು ದುರ್ಗಂಧ ಯಾವುದೇ  ರೀತಿಯ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲವಂತೆ. ಇವುಗಳಿಂದ ಹೊರಹೊಮ್ಮುವ ದುರ್ಗಂಧ ರಾಸಾಯನಿಕವೇ ಆದರೂ ಅವುಗಳಿಂದ ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು  ವಿಜ್ಞಾನಿಗಳು ಹೇಳಿದ್ದಾರೆ.

ಈ ಕ್ಯಾಪ್ಸುಲ್ ಗಳ ಬಗ್ಗೆ ಈಗಾಗಲೇ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರದ ಮೂಲಕ ವರದಿ ನೀಡಿದ್ದು, ರಕ್ಷಣಾ ಸಚಿವಾಲಯದ ವಿಶೇಷ ಸಂಶೋಧನಾ ಶಾಖೆಗೂ ಮಾಹಿತಿ  ನೀಡಲಾಗಿದೆಯಂತೆ. ಕೇಂದ್ರ ರಕ್ಷಣಾ ಸಚಿವಾಲಯದಿಂದ ಈ ಕ್ಯಾಪ್ಸುಲ್ ಗಳ ಬಳಕೆಗೆ ಅನುಮೋದನೆ ದೊರೆತ ಬಳಿಕ ಇವುಗಳನ್ನು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ನಡೆಯುವ ಗಲಭೆ ನಿಯಂತ್ರಣ ಕಾರ್ಯಾಚರಣೆಗಳಲ್ಲಿ  ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಎಫ್ಎಫ್ ಡಿಸಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com