ಭಾರತವೇ ನನ್ನ ತಾಯ್ನಾಡು, ಪಾಕಿಸ್ತಾನಕ್ಕೆ ಹೋಗಲ್ಲ: ಪೆಹ್ಲುಖಾನ್ ಪುತ್ರ

ಭಾರತ ನನ್ನ ತಾಯ್ನಾಡು, ನಮಗೆ ಪಾಕಿಸ್ತಾನಕ್ಕೆ ತೆರಳುವ ಯಾವುದೇ ಉದ್ದೇಶವಿಲ್ಲ ಎಂದು ಆಳ್ವಾರ್​ನಲ್ಲಿ ಗೋರಕ್ಷಕರು ನಡೆಸಿದ ದಾಳಿಗೆ ಬಲಿಯಾದ ಹರ್ಯಾಣ ...
ಮೃತ ಪಟ್ಟಿದ್ದ ಪೆಹ್ಲು ಖಾನ್(ಸಂಗ್ರಹ ಚಿತ್ರ)
ಮೃತ ಪಟ್ಟಿದ್ದ ಪೆಹ್ಲು ಖಾನ್(ಸಂಗ್ರಹ ಚಿತ್ರ)
ನವದೆಹಲಿ: ಭಾರತ ನನ್ನ ತಾಯ್ನಾಡು, ನಮಗೆ ಪಾಕಿಸ್ತಾನಕ್ಕೆ ತೆರಳುವ ಯಾವುದೇ ಉದ್ದೇಶವಿಲ್ಲ  ಎಂದು ಆಳ್ವಾರ್​ನಲ್ಲಿ ಗೋರಕ್ಷಕರು ನಡೆಸಿದ ದಾಳಿಗೆ ಬಲಿಯಾದ ಹರ್ಯಾಣ ಮೂಲದ ಡೈರಿ ಮಾಲೀಕ  ಪೆಹ್ಲು ಖಾನ್  ಪುತ್ರ ಇರ್ಷಾದ್ ಖಾನ್ ಹೇಳಿದ್ದಾನೆ.
ನಾವು ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿ ಬದುಕಲು ಸಾಧ್ಯವಿಲ್ಲ, ಭಾರತ ತಾಯ್ನಾಡು ಆಗಿದೆ ಎಂದು ಹೇಳಿರುವ ಇರ್ಷಾದ್ ಖಾನ್, ತನ್ನ ತಂದೆ ಸಾವಿಗೆ ನ್ಯಾಯ ನೀಡಬೇಕೆಂದು ಕೋರಿದ್ದಾನೆ.
ಏಪ್ರಿಲ್ -1 ರಂದು ಸ್ವಯಂ ಘೋಷಿತ ಗೋರಕ್ಷಕರು 24 ವರ್ಷದ ವ್ಯಕ್ತಿಯ ಮೇಲೂ ಹಲ್ಲೆ ನಡೆಸಿದ್ದರು. ಕೃಷಿಕ ಬಿಕ್ಕಟ್ಟು, ಗೋರ-ರಾಜಕೀಯ, ಮತ್ತು ಹತ್ಯೆ ಸಂಬಂಧ ಭೂಮಿ ಅಧಿಕಾರ್  ಅಂದೋಲನ್ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಇರ್ಷಾದ್ ಖಾನ್,ಹತ್ಯೆಕೋರರ ವಿರುದ್ಧ ಸರ್ಕಾರ ಯಾವುದೇ ಸಮರ್ಥವಾದ ನಿಲುವು ತೆಗೆದು ಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ನಡೆಯುತ್ತಿದೆ. ಭಾರತ ಬಿಟ್ಟು ಪಾಕಿಸ್ತಾನಕ್ಕೆ ತೆರಳುವಂತೆ ಮುಸ್ಲಿಮರಿಗೆ ಹೇಳಲಾಗುತ್ತಿದೆ.ಆದರೆ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರು ಶಾಂತಿಯುತವಾಗಿ ಬದುಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಯಾವುದೋ ಕೆಟ್ಟ ಶಕ್ತಿಗಳು ಎರಡು ಸಮುದಾಯದ ನಡುವಿನ ಸಾಮರಸ್ಯವನ್ನು  ಹಾಳು ಮಾಡುತ್ತಿದ್ದಾರೆ. ಇದೆಲ್ಲಾ ವೋಟ್ ರಾಜಕಾರಣ ಎಂದು ಆರೋಪಿಸಿದ್ದಾರೆ. ದೇಶದಾದ್ಯಂತ ಹಲವು ಭಾಗಗಳಲ್ಲಿ ಹತ್ಯೆಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿದೆ ಎಂದು ಹೇಳಿದ್ದಾರೆ.
55 ವರ್ಷದ ಪೆಹ್ಲುಖಾನ್ ಮೇಲೆ ಮಾರಣಾಂತಿಕವಾಗಿ ಆಲ್ವಾರ್ ಗ್ರಾಮದಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಗೋವುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಹಲ್ಲೆ ನಡೆಸಲಾಗಿತ್ತು. ಏಪ್ರಿಲ್ 3 ರಂದು  ಪೆಹ್ಲುಖಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com