ಜುಲೈ.4 ರಂದು ಇಸ್ರೇಲ್ ಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರಮೋದಿಯವರು 7 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ರಕ್ಷಣೆ, ಭದ್ರತೆ, ಸೈಬರ್ ಅಪರಾಧ, ನೀರು ನೇರಿದಂತೆ ವಿವಿಧ ವಿಷಯಗಳಲ್ಲಿ ಇಸ್ರೇಲನ್ ನೊಂದಿಹೆ ಮಹತ್ವದ ಒಪ್ಪಂದ ಏರ್ಪಟ್ಟಿದೆ.
ಇಸ್ರೇಲ್ ಅಧ್ಯಕ್ಷ ನೇತಾನ್ಯಾಹು ಹಾಗೂ ಮೋದಿಯವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈ ವೇಳೆ ಉಭಯ ರಾಷ್ಟ್ರಗಳು ತಂತ್ರಜ್ಞಾನ, ಮಾನವ ಸಂಪನ್ಮೂಲಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ. ಭಾರತ-ಇಸ್ರೇಲ್ ಸೇರಿದಂತೆ ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಭಯೋತ್ಪಾದನೆ, ಮೂಲಭೂತವಾದದ ವಿರುದ್ಧ ಜಂಟಿಯಾಗಿ ಹೋರಾಟ ನಡೆಸಲು ಕೂಡ ಉಭಯ ನಾಯಕರು ಕೈ ಜೋಡಿಸಿದ್ದಾರೆ.
70 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಗೆ ಭೇಟಿ ನೀಡಿರುವುದ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದ ಬೆಂಜಮಿನ್ ಅವರು ಭಾರತದ ಕನಸಿನ ಕೂಸಾಗಿರುವ ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳಲ್ಲಿ ಸಹಕಾರ ನೀಡುವುದಾಗಿ ಘೋಷಿಸಿದ್ದರು.
ಇಸ್ರೇಲ್ ಭೇಟಿ ಬಳಿಕ ಹ್ಯಾಮ್ ಬರ್ಗ್ ನಲ್ಲಿ ಏರ್ಪಡಿಸಲಾಗಿದ್ದ ಜಿ20-ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನ್'ಗೆ ಭೇಟಿ ನೀಡಿದ್ದರು. ಜರ್ಮನಿಯ ಎರಡನೇ ಅತಿದೊಡ್ಡ ನಗರ ಹ್ಯಾಮ್ ಬರ್ಗ್ ನಲ್ಲಿ ನಡೆದ ಜಿ20 ಶೃಂಗದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿಯವರು 24 ಗಂಟೆಗಳಲ್ಲಿ 13 ವಿಶ್ವ ನಾಯಕರನ್ನು ಭಟಿ ಮಾಡಿ ಸಮಾಚನೆ ನಡೆಸಿದರು. ಅಲ್ಲದೆ, ಭಯೋತ್ಪಾದನೆ ವಿರುದ್ಧ ಜಿ-20 ದೇಶಗಳು ತೊಡೆತಟ್ಟಿ ನಿಲ್ಲುವ ನಿರ್ಣಯ ಕೈಗೊಳ್ಳುವಲ್ಲಿ ಮುಂದಾಳತ್ವ ವಹಿಸಿ ಯಶಸ್ವಿಯಾದರು.
ಈ ಮೂಲಕ ಭಾರತದ ಉದ್ದೇಶಗಳನ್ನು ಈಡೇರಿಸಲು ಪ್ರಧಾನಮಂತ್ರಿಗಳು ಶೃಂಗದ ಅವಕಾಶವನ್ನು ಸಮರ್ಥವಾಗಿ ಬಳಸಿದ್ದಾರೆಂಬ ಮೆಚ್ಚುಗೆಗಳು ವ್ಯಕ್ತವಾಗಿದೆ.
ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ ಅವರು, ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ಪ್ರಧಾನಿ ಥೆರೇಸಾ ಮೇ, ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರಾನ್ ಜತೆ ನಡೆಸಿದರು. ಅದಲಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವಾಗೇ ಎದ್ದು ಬಂದು ಮೋದಿ ಅವರನ್ನು ಮಾತನಾಡಿಸಿದ್ದು ವಿಶೇಷವಾಗಿತ್ತು.
ಇದೇ ವೇಳೆ ಬ್ರಿಕ್ಸ್ ನಾಯಕರ ಭೇಟಿ ಸಂದರ್ಭದಲ್ಲಿ ಬ್ರೆಜಿಲ್ ಪ್ರಧಾನಿ ಮೆೈಕಲ್ ಟೀಮರ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಝೂಮಾ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆ ಮಾತುಕತೆ ನಡೆಸುವ ಮೂಲಕ ಗಮನ ಸೆಳೆದರು. ಇಟಲಿ ಪ್ರಧಾನಿ ಪೌಲೋ ಜೆಂಟಿಲೋನಿ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್, ಮೆಕ್ಸಿಕೋ, ಅರ್ಜೆಂಟೀನಾ, ವಿಯೆಟ್ನಾಂ ನಾಯಕರ ಜತೆಗೂ ಚರ್ಚೆ ನಡೆಸಿದರು.