ಗೋಮಾಂಸ ಸಾಗಣೆ ಶಂಕೆ: ನಾಗ್ಪುರದಲ್ಲಿ ವ್ಯಕ್ತಿಗೆ ಥಳಿತ, ನಾಲ್ವರ ಬಂಧನ

ಅಕ್ರಮವಾಗಿ ಗೋಮಾಂಸ ಸಾಗಣೆ ಮಾಡುತ್ತಿದ್ದಾನೆಂದು ಆರೋಪಿಸಿ 32 ವರ್ಷದ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುರುವಾರ ನಾಗ್ಪುರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಾಗ್ಪುರ: ಅಕ್ರಮವಾಗಿ ಗೋಮಾಂಸ ಸಾಗಣೆ ಮಾಡುತ್ತಿದ್ದಾನೆಂದು ಆರೋಪಿಸಿ 32 ವರ್ಷದ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುರುವಾರ ನಾಗ್ಪುರದಲ್ಲಿ ನಡೆದಿದೆ.

ನಾಗ್ಪುರದ ಭರ್ಸಿಂಗಿ ಗ್ರಾಮದ ಬುಧವಾರ ಈ ಘಟನೆ ನಡೆದಿದ್ದು, ಥಳಿತಕ್ಕೊಳಗಾದ ವ್ಯಕ್ತಿಯನ್ನು ಸಲೀಂ ಇಸ್ಮಾಯಿಲ್ (32)  ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಸಲೀಂ ಇಸ್ಮಾಯಿಲ್ ಅಮ್ನೇರ್ ಗ್ರಾಮದಿಂದ  ಕತೋಲ್'ಗೆ ದ್ವಿಚಕ್ರ ವಾಹನದಲ್ಲಿ ಮಾಂಸ ಸಾಗಣೆ ಮಾಡುತ್ತಿದ್ದರು. ಈ ವೇಳೆ ವಾಹನವನ್ನು ಅಡ್ಡಗಟ್ಟಿದ ನಾಲ್ಕು ಮಂದಿ, ಗೋಮಾಂಸ ಸಾಗಣೆ ಮಾಡುತ್ತಿದ್ದಾನೆಂದು ಶಂಕಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಪ್ರಸ್ತುತ ಗಂಭೀರವಾಗಿ ಗಾಯಗೊಂಡಿರುವ ಸಲೀಂ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಲಾಲ್ಖೆಡಾ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿವಾರಿಯವರು ಹೇಳಿದ್ದಾರೆ. ಪ್ರಕರಣ  ದಾಖಲಿಸಿಕೊಂಡಿರುವ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರನ್ನು ಮೊರೇಶ್ವರ್ ತೆಂಡೂಲ್ಕರ್, ಊಯ್ಕೆ, ರಾಮೇಶ್ವರ್ ತಾಯ್ವಾಡೆ ಮತ್ತು ಜಗದೀಶ್ ಚೌಧರಿ ಎಂದು  ಗುರ್ತಿಸಲಾಗಿದೆ. ಬಂಧಿತರೆಲ್ಲರೂ ಸ್ಥಳೀಯ ಆಟೋ ಚಾಲಕರೆಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com