ಆಡಳಿತಾರೂಢ ಎನ್ ಡಿಎ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್
ದೇಶ
ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಯುವಕರ ನಿರೀಕ್ಷೆಗಳತ್ತ ಹೆಚ್ಚು ಗಮನಹರಿಸುವೆ: ಕೋವಿಂದ್
ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದೇ ಆದರೆ, ಯುವಕರ ನಿರೀಕ್ಷೆಗಳತ್ತ ಹೆಚ್ಚು ಗಮನಹರಿಸಿ, ಆ ನಿರೀಕ್ಷೆಗಳನ್ನು ಪೂರ್ಣಗೊಳಿಸುವೆ ಎಂದು ಆಡಳಿತಾರೂಢ ಎನ್ ಡಿಎ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ಗುರುವಾರ ಹೇಳಿದ್ದಾರೆ...
ಜೈಪುರ: ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದೇ ಆದರೆ, ಯುವಕರ ನಿರೀಕ್ಷೆಗಳತ್ತ ಹೆಚ್ಚು ಗಮನಹರಿಸಿ, ಆ ನಿರೀಕ್ಷೆಗಳನ್ನು ಪೂರ್ಣಗೊಳಿಸುವೆ ಎಂದು ಆಡಳಿತಾರೂಢ ಎನ್ ಡಿಎ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ಗುರುವಾರ ಹೇಳಿದ್ದಾರೆ.
ಬಿಜೆಪಿ ಸಂಸದರು ಹಾಗೂ ಶಾಸಕರನ್ನುದ್ದೇಶಿಸಿ ಮಾತನಾಡಿರುವ ಅವರು, ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಸಂವಿಧಾನದ ಪ್ರಕಾರವೇ ಕರ್ತವ್ಯ ನಿರ್ವಹಿಸುತ್ತೇನೆ. ರಾಜ್ಯ ಹಾಗೂ ದೇಶದ ಅಭಿವೃದ್ಧಿಯತ್ತ ಗಮನಹರಿಸುತ್ತೇನೆಂದು ಹೇಳಿದ್ದಾರೆ.
ಎಲ್ಲಾ ಜಾತಿ, ಸಮುದಾಯಗಳ ನಡುವೆ ಸಮಾನತೆ, ಶೈಕ್ಷಣಿಕ ಆಧುನೀಕರಣವೇ ನನ್ನ ಪ್ರಮುಖ ಆದ್ಯತೆಗಳಾಗಿವೆ ಎಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ವಿರೋಧ ಪಕ್ಷಗಳು ಹೇಳುವಂತೆ ರಾಷ್ಟ್ರಪತಿ ಚುನಾವಣೆ ತತ್ವಗಳ ಕುರಿತ ಹೋರಾಟವಲ್ಲ. ಎನ್'ಡಿಎ ಸರ್ಕಾರ ಕೋವಿಂದ್ ಅವರ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣಗಳನ್ನು ನೋಡಿದೆ. ಹೀಗಾಗಿಯೇ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಾಕಷ್ಟು ಶ್ರಮವನ್ನು ಮಟ್ಟಿದ್ದಾರೆ. ಆದರೆ, ಇದಕ್ಕೆ ವಿರೋಧ ಪಕ್ಷಗಳು ತೃಪ್ತಿಕರ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಎನ್'ಡಿಎ ಮೈತ್ರಿ ಪಕ್ಷಗಳು ಸೇರಿದಂತೆ ಸ್ಥಳೀಯ ಪಕ್ಷಗಳು, ಸ್ವತಂತ್ರ ಶಾಸಕರು ಹಾಗೂ ಸಂಸದರು ಕೋವಿಂದ್ ಅವರಿಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ