ಜಮ್ಮು-ಕಾಶ್ಮೀರ: ರೂ.20 ಕೋಟಿ ಹೆರಾಯಿನ್ ವಶ, ಇಬ್ಬರು ಶಂಕಿತ ಬಂಧನ
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ರೂ.20 ಕೋಟಿ ಮೌಲ್ಯದ 15 ಕೆಜಿ ಹೆರಾಯಿನ್'ನ್ನು ವಶಕ್ಕೆ ಪಡೆದುಕೊಂಡು ಇಬ್ಬರು ಶಂಕಿತರನ್ನು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ರೂ.20 ಕೋಟಿ ಮೌಲ್ಯದ 15 ಕೆಜಿ ಹೆರಾಯಿನ್'ನ್ನು ವಶಕ್ಕೆ ಪಡೆದುಕೊಂಡು ಇಬ್ಬರು ಶಂಕಿತರನ್ನು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಮಾರಾಟ ಮಾಡುವ ಉದ್ದೇಶದಿಂದ ಶಂಕಿತ ವ್ಯಕ್ತಿಗಳು ವಾಹನವೊಂದರಲ್ಲಿ 15 ಕೆಜಿ ಹೆರಾಯಿನ್ ಪ್ಯಾಕೆಟ್ ಗಳನ್ನು ಕಾಶ್ಮೀರದಿಂದ ಅಮೃತಸರಕ್ಕೆ ಸಾಗಿಸುತ್ತಿದ್ದರು. ಈ ವೇಳೆ ವಾಹನವನ್ನು ಪರಿಶೀಲನೆ ನಡೆಸಿರುವ ಭದ್ರತಾಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.
ತಪಾಸಣೆ ವೇಳೆ ರೂ.20 ಮೌಲ್ಯದ ಹೆರಾಯಿನ್, ನಾಲ್ಕು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಂಕಿತರು ಪ್ರಯಾಣಿಸುತ್ತಿದ್ದ ವಾಹನ ಶ್ರೀನಗರ ನೋಂದಾಯಿತ ವಾಹನವಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಬಂಧನಕ್ಕೊಳಗಾಗಿರುವ ಇಬ್ಬರು ವ್ಯಕ್ತಿಗಳು ಈ ಹಿಂದೆ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದ್ದು, ಇಬ್ಬರು ಶಂಕಿತರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಮಾದಕ ವಸ್ತುಗಳನ್ನು ಪಾಕಿಸ್ತಾನ ಮತ್ತು ಕರ್ನಾಹ್ ನಿಂದ ಕಳುಹಿಸಲಾಗಿದೆ. ವಶಕ್ಕೆ ಪಡೆದುಕೊಂಡಿರುವ ಹೆರಾಯಿನ್ ಪ್ಯಾಕೆಟ್ ಗಳ ಮೇಲೆ ಪಾಕಿಸ್ತಾನದಲ್ಲಿ ತಯಾರು ಮಾಡಿರುವ ಚಿಹ್ನೆಗಳಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದದೆ ಎಂದು ಪೊಲೀಸ್ ಅಧಿಕಾರಿ ಎಸ್.ಡಿ. ಸಿಂಗ್ ಹೇಳಿದ್ದಾರೆ.