ವಿವಾದಾತ್ಮಕ ಹೇಳಿಕೆ: ಬಿಜೆಪಿ ಸಂಸದೆ ರೂಪಾ ಗಂಗೂಲಿ ವಿರುದ್ಧ ಎಫ್‌ಐಆರ್!

ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಮಾತನಾಡುವ ಭರದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದ ಬಿಜೆಪಿ ಸಂಸದೆ ರೂಪಾ ಗಂಗೂಲಿ ಅವರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಮಾತನಾಡುವ ಭರದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದ ಬಿಜೆಪಿ ಸಂಸದೆ ರೂಪಾ ಗಂಗೂಲಿ ಅವರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಪಶ್ಚಿಮ ಬಂಗಾಳದ ಬರಾಕ್‌ಪುರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಿಮ್ತಾ ಠಾಣೆಯಲ್ಲಿ ರೂಪಾ ವಿರುದ್ಧ ಪ್ರಕರಣ ದಾಖಲಾಗಿದ್ದು, ರೂಪಾ ಗಂಗೂಲಿ ಹೇಳಿಕೆಯಿಂದ ನನ್ನ ಘನತೆಗೆ ಧಕ್ಕೆ ಉಂಟಾಗಿದೆ ಹಾಗೂ ನಮಗೆ ಈ ಮೂಲಕ  ಬೆದರಿಕೆ ಒಡ್ಡಿದಂತಾಗಿದೆ ಎಂದು ಮಹಿಳೆ ದೂರು ನೀಡಿದ್ದರು. ಈ ದೂರಿನ ಆರೋಪದ ಮೇರೆಗೆ ರೂಪಾ ಗಂಗೂಲಿ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

"ರೂಪಾ ಗಂಗೂಲಿ ಹೇಳಿಕೆಗಳು ಸಾರ್ವಜನಿಕವಾಗಿ ಕುಚೋದ್ಯ, ಅಪರಾಧಕ್ಕೆ ಕುಮ್ಮಕ್ಕು ನೀಡುವಂಥದ್ದು ಹಾಗೂ ಮಹಿಳೆಯ ಘನತೆಗೆ ಧಕ್ಕೆ ತರುವಂತದ್ದು ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅವರ ವಿರುದ್ಧ  ಎಫ್‌ಐಆರ್ ದಾಖಲಾಗಿದೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅಂತೆಯೇ ಸುಳ್ಳು ಪ್ರಕರಣಗಳ ಆಧಾರದಲ್ಲಿ ತಮ್ಮನ್ನು ಪೊಲೀಸರು ಬಂಧಿಸಲು ಯತ್ನಿಸಿದರೆ, ಮಮತಾ ಬ್ಯಾನರ್ಜಿಯವರ ನಿವಾಸಕ್ಕೆ ಬೆಂಕಿ  ಹಚ್ಚುವುದಾಗಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ.

ಈ ಹಿಂದೆ ಮಮತಾ ಸರ್ಕಾರದ ವಿರುದ್ಧ ಕಿಡಿಕಾರಿದ್ದ ರೂಪಾ ಗಂಗೂಲಿ ಅವರು, ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು, ಇಲ್ಲಿ ಪತ್ನಿ ಅಥವಾ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗದೇ ಹದಿನೈದು ದಿನಗಳನ್ನೂ  ಕಳೆಯುವಂತಿಲ್ಲ ಎಂದು ಹೇಳಿದ್ದರು. ಅಂತೆಯೇ ಮಮತಾ ಬ್ಯಾನರ್ಜಿಯವರನ್ನು ಮತ್ತು ಪಶ್ಚಿಮ ಬಂಗಾಳ ಸರ್ಕಾರವನ್ನು ಹೊಗಳುವ ಎಲ್ಲ ಪಕ್ಷಗಳಿಗೆ ನಾನು ಸವಾಲು ಹಾಕುತ್ತೇನೆ..ಮಮತಾ ಬ್ಯಾನರ್ಜಿಯವರಿಂದ ಯಾವುದೇ  ಆತಿಥ್ಯ ಪಡೆಯದೇ ತಮ್ಮ ಪತ್ನಿ, ಪುತ್ರಿಯರು ಹಾಗೂ ಸೊಸೆಯಂದಿರನ್ನು ಅಲ್ಲಿಗೆ ಕಳುಹಿಸಲಿ. ಅವರ ಮೇಲೆ ಅತ್ಯಾಚಾರ ಆಗದಿದ್ದರೆ ಮತ್ತೆ ಹೇಳಿ" ಎಂದು ರೂಪಾ ಗಂಗೂಲಿ ದೆಹಲಿಯಲ್ಲಿ ಖಾಸಗಿ ಸುದ್ದಿವಾಹಿನಿ ಜತೆ  ಮಾತನಾಡುತ್ತಾ ಹೇಳಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com