ಮೊಬೈಲ್ ಬಳಕೆ ವಿಚಾರದಲ್ಲಿ ಗಲಾಟೆ: ಯೋಧನಿಂದಲೇ ಸೇನಾಧಿಕಾರಿಯ ಗುಂಡಿಟ್ಟು ಹತ್ಯೆ!

ಮೊಬೈಲ್ ಬಳಕೆ ಮಾಡುವ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ವಿಚಾರಕ್ಕೆ ಭುಗಿಲೆದ್ದ ಗಲಾಟೆಯಿಂದಾಗಿ ಆಕ್ರೋಶಗೊಂಡ ಭಾರತೀಯ ಸೇನೆ ಯೋಧನೊಬ್ಬ ತನ್ನ ಸೇನಾಧಿಕಾರಿಯನ್ನು ಗುಂಡಿಕ್ಕಿ ಹೆತ್ಯೆ ಗೈದಿರುವ ಘಟನೆ ಮಂಗಳವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಮೊಬೈಲ್ ಬಳಕೆ ಮಾಡುವ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ವಿಚಾರಕ್ಕೆ ಭುಗಿಲೆದ್ದ ಗಲಾಟೆಯಿಂದಾಗಿ ಆಕ್ರೋಶಗೊಂಡ ಭಾರತೀಯ ಸೇನೆ ಯೋಧನೊಬ್ಬ ತನ್ನ ಸೇನಾಧಿಕಾರಿಯನ್ನು ಗುಂಡಿಕ್ಕಿ ಹೆತ್ಯೆ ಗೈದಿರುವ ಘಟನೆ  ಮಂಗಳವಾರ ನಡೆದಿದೆ.

ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಬುಚಾರ್ ಪೋಸ್ಟ್ ನಲ್ಲಿರುವ ಸೇನಾ ಕ್ಯಾಂಪ್ ನಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ 71  ರಾಷ್ಟ್ರೀಯ ರೈಫಲ್ಸ್ ತಂಡದ ಸೇನಾಧಿಕಾರಿಯನ್ನು ಸೈನಿಕ ತನ್ನ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸೇನಾ ಮೂಲಗಳ ಪ್ರಕಾರ ಅಧಿಕಾರಿಯ ತಪಾಸಣೆ ನಡೆಸಿದಾಗ ಕರ್ತವ್ಯದಲ್ಲಿದ್ದ ಯೋಧ  ಮೊಬೈಲ್​ನಲ್ಲಿ ಮಾತನಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮೇಜರ್ ಶಿಖರ್​ ಅವರು ಯೋಧನಿಂದ ಮೊಬೈಲ್ ಕಿತ್ತುಕೊಂಡು, ಕರ್ತವ್ಯದಲ್ಲಿರುವಾಗ ಫೋನ್ ಬಳಸಬೇಡ ಎಂದು ಶಿಸ್ತಿನ ಪಾಠ ಹೇಳಿದ್ದಾರೆ.

ಅಷ್ಟಕ್ಕೇ ಕ್ರೋಧಗೊಂಡ ಯೋಧ ತನ್ನ ಬಳಿಯಿದ್ದ ಎಕೆ 47 ರೈಫಲ್​ನಿಂದ ಎರಡು ಸುತ್ತು ತನ್ನ ಹಿರಿಯ ಅಧಿಕಾರಿ ಮೇಜರ್ ಶಿಖರ್​ ಅವರತ್ತ ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಮಾರಣಾಂತಿಕವಾಗಿ ಗಾಯಗೊಂಡ ಮೇಜರ್  ಶಿಖರ್​ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆ ವೇಳೆಗೆ ಅವರು ಅಸುನೀಗಿದ್ದರು ಎಂದು ಸೇನಾ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com