
ಪುಣೆ: ಹಿರಿಯ ಸ್ವಾತಂತ್ರ್ಯ ಹೋರಾಟಾಗಾರ ಬಾಲಂಗಂಗಾಧರ ತಿಲಕರ ಮೊಮ್ಮಗ ಹಾಗೂ ಕಾಂಗ್ರೆಸ್ ನಾಯಕ ರೋಹಿತ್ ತಿಲಕ್ ವಿರುದ್ಧ ಪುಣೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಪತ್ರಿಕೆಯೊಂದ ವರದಿಯನ್ವಯ ಪುಣೆ ಕಾಂಗ್ರೆಸ್ ಮುಖಂಡರೂ ಕೂಡ ಆಗಿರುವ ರೋಹಿತ್ ತಿಲಕ್ ವಿರುದ್ಧ 40 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ದೂರಿನಲ್ಲಿ ಮಹಿಳೆ ರೋಹಿತ್ ತಿಲಕ್ ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ಸಾಕಷ್ಟು ಬಾರಿ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ ಅಸ್ವಾಭಾವಿಕ ಲೈಂಗಿಕತೆಗೂ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪುಣೆ ಪೊಲೀಸರು ರೋಹಿತ್ ತಿಲಕ್ ವಿರುದ್ಧ ಅತ್ಯಾಚಾರ, ಅಸ್ವಾಭಾವಿಕ ಅಪರಾಧಗಳು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಮತ್ತು ಅಪರಾಧ ಸಂಚು ಸೇರಿದಂತೆ ಹಲವು ಆರೋಪದಡಿಯಲ್ಲಿ ವಿವಿಧ ಸೆಕ್ಷನ್ ಗಳಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ರೋಹಿತ್ ತಿಲಕ್ ಪುಣೆ ಮಾಜಿ ಮೇಯರ್ ಹಾಗೂ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ಮುಖಂಡ ಜಯಂತ್ ರಾವ್ ತಿಲಕ್ ಅವರ ಮೊಮ್ಮಗನಾಗಿದ್ದು, ಈ ಹಿಂದೆ 2014ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಸ್ಬಾ ಪೇಟ್ ಕ್ಷೇತ್ರದಿಂದ ಕಾಂಗ್ರೆಸ್ ಪರ ಸ್ಪರ್ಧಿಸಿ ಸೋತಿದ್ದರು.
Advertisement