ಪ್ರತ್ಯೇಕ ಧ್ವಜ ವಿವಾದ: ಕರ್ನಾಟಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು- ಶಿವಸೇನೆ

ಪ್ರತ್ಯೇಕ ಧ್ವಜ ಆಗ್ರಹಿಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದು ಶಿವಸೇನೆ ಬುಧವಾರ ಹೇಳಿದೆ...
ಶಿವಸೇನೆ (ಸಂಗ್ರಹ ಚಿತ್ರ)
ಶಿವಸೇನೆ (ಸಂಗ್ರಹ ಚಿತ್ರ)
ಮುಂಬೈ: ಪ್ರತ್ಯೇಕ ಧ್ವಜ ಆಗ್ರಹಿಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದು ಶಿವಸೇನೆ ಬುಧವಾರ ಹೇಳಿದೆ. 
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸಿ, ಅದಕ್ಕೆ ಕಾನೂನು ಮಾನ್ಯತೆ ನೀಡುವ ಸಲುವಾಗಿ ಪರಾಮರ್ಶಿಸಲು ರಾಜ್ಯ ಸರಕಾರ ಒಂಬತ್ತು ಮಂದಿಯ ಸಮಿತಿ ರಚಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಡೆ ಇದೀಗ ರಾಷ್ಟ್ರವ್ಯಾಪ್ತಿ ವಿವಾದಕ್ಕೆ ಕಾರಣವಾಗಿದೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ ನಾಯಕಿ ಮನೀಷಾ ಕಯಾಂಡೆಯವರು, ಪ್ರತ್ಯೇಕ ಧ್ವಜಕ್ಕೆ ಆಗ್ರಹ ವಿಚಾರ ಖಂಡನೀಯವಾದದ್ದು. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದ್ದು, ಮಧ್ಯಪ್ರವೇಶ ಮಾಡಬೇಕಿದೆ. ಕರ್ನಾಟಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದ್ದಾರೆ. 
ಈ ವರೆಗೂ ಯಾವುದೇ ಇತರೆ ರಾಜ್ಯಗಳು ಪ್ರತ್ಯೇಕ ಧ್ವಜ ಬೇಕೆಂದು ಆಗ್ರಹಿಸಿರಲಿಲ್ಲ. ದೇಶದಲ್ಲಿ ನಮ್ಮದೇ ರಾಷ್ಟ್ರ ಧ್ವಜನಿದೆ. ರಾಷ್ಟ್ರ ಧ್ವಜವನ್ನು ಕಡೆಗಣಿಸಿ ಪ್ರತ್ಯೇಕ ಧ್ವಜ ಆಗ್ರಹಿಸುವುದು ಖಂಡನೀಯ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com