ಮಕ್ಕಳ ಕಳ್ಳಸಾಗಾಣಿಕೆ: ರೂಪಾ ಗಂಗೂಲಿ, ಕೈಲಾಶ್ ವಿಜಯವರ್ಗೀಯಗೆ ಸಿಐಡಿ ಸಮನ್ಸ್

ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣ ಸಂಬಂಧ ಬಿಜೆಪಿ ಮುಖಂಡರಾದ ರೂಪಾ ಗಂಗೂಲಿ ಮತ್ತು ಕೈಲಾಶ್ ವಿಜಯವರ್ಗೀಯ ಅವರಿಗೆ ಅಪರಾಧ ತನಿಖಾ ಇಲಾಖೆ(ಸಿಐಡಿ)...
ರೂಪಾ ಗಂಗೂಲಿ, ಕೈಲಾಶ್ ವಿಜಯವರ್ಗೀವಾ
ರೂಪಾ ಗಂಗೂಲಿ, ಕೈಲಾಶ್ ವಿಜಯವರ್ಗೀವಾ
Updated on
ಕೋಲ್ಕತ್ತಾ: ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣ ಸಂಬಂಧ ಬಿಜೆಪಿ ಮುಖಂಡರಾದ ರೂಪಾ ಗಂಗೂಲಿ ಮತ್ತು ಕೈಲಾಶ್ ವಿಜಯವರ್ಗೀಯ ಅವರಿಗೆ ಅಪರಾಧ ತನಿಖಾ ಇಲಾಖೆ(ಸಿಐಡಿ) ಸಮನ್ಸ್ ನೀಡಿದೆ. 
ಇದೇ ವೇಳೆ ಸಿಐಡಿ ಅಧಿಕಾರಿಗಳು ಸೆಕ್ಷನ್ ಸಿಆರ್ಪಿಸಿ 160ರ ಅಡಿಯಲ್ಲಿ ವಿನಾಯಕ್ ಮಿಶ್ರಾ ಮತ್ತು ಪ್ರಶಾಂತ್ ಶ್ರೀ ಅವರಿಗೆ ಸಮನ್ಸ್ ನೀಡಿದೆ. 
ಈ ಪ್ರಕರಣ ಸಂಬಂಧ ರೂಪಾ ಗಂಗೂಲಿ ಮತ್ತು ಕೈಲಾಶ್ ವಿಜಯವರ್ಗೀಯ ಸೇರಿದಂತೆ ನಾಲ್ವರು ನಾಯಕರು ಜುಲೈ 27ರೊಳಗೆ ಸಿಐಡಿ ಅಧಿಕಾರಿಗಳು ಮುಂದೆ ಹಾಜರಾಗಬೇಕಿದೆ. 
ಮಕ್ಕಳ ಕಳ್ಳಸಾಗಣೆಕೆ ಆರೋಪದಡಿ ಪಶ್ಚಿಮ ಬಂಗಾಳದ ಪೊಲೀಸರು ದಾರ್ಜಿಲಿಂಗ್ ನಲ್ಲಿ ಪಶ್ಚಿಮ ಬಂಗಾಳದ ಮಹಿಳಾ ಘಟಕದ ನಾಯಕಿ ಜೂಹಿ ಚೌಧರಿ ಅವರನ್ನು ಬಂಧಿಸಿತ್ತು. ವಿಚಾರಣೆ ವೇಳೆ ರೂಪಾ ಗಂಗೂಲಿ ಮತ್ತು ಕೈಲಾಶ್ ವಿಜಯವರ್ಗೀಯಾ ಅವರ ಪಾತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com