ರಾಜೇಶ್ ಅಗರ್ ವಾಲ್ ಅವರು ಅನುಮಾನಾಸ್ಪದ ವ್ಯವಹಾರಗಳ ಮೂಲಕ ಕಪ್ಪುಹಣವನ್ನು ಸಕ್ರಮಗೊಳಿಸುವ ದಂಧೆಯಲ್ಲಿ ತೊಡಗಿಸಿಕೊಂಡಿರುವ ಆರೋಪ ಎದುರಿಸುತ್ತಿದ್ದು, ಶೆಲ್ ಕಂಪೆನಿ ಅವ್ಯವಹಾರಕ್ಕೆ ಸಂಬಂಧಿಸಿ ಮಾರ್ಚ್ 20ರಂದು ಬಂಧನಕ್ಕೊಳಗಾಗಿದ್ದ ಎಸ್.ಕೆ. ಜೈನ್ ಮತ್ತು ವಿ.ಕೆ. ಜೈನ್ ಅವರ ನೆರವಿನಿಂದ ರಾಜೇಶ್ ಕಪ್ಪುಹಣ ಸಕ್ರಮಗೊಳಿಸುವ ವ್ಯವಹಾರ ನಡೆಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.