ವಾಯುದಾಳಿ
ವಾಯುದಾಳಿ

ಅಮೆರಿಕ ಸೇನೆಯ ಅಚಾತುರ್ಯ: ವಾಯುದಾಳಿಯಲ್ಲಿ 16 ಅಫ್ಗಾನ್ ಪೊಲೀಸರು ಸಾವು

ಅಮೆರಿಕ ಸೇನೆಯ ಅಚಾತುರ್ಯದಿಂದ 16 ಅಫ್ಗಾನ್ ಪೊಲೀಸರು ಮೃತಪಟ್ಟಿರುವ ಘಟನೆ ಗೇರೆಸ್ಕ್ ಜಿಲ್ಲೆಯ ಹೆಲ್ಮೆಂಡ್ ಪ್ರಾಂತ್ಯದಲ್ಲಿ ನಡೆದಿದೆ...
Published on
ಗೇರೆಸ್ಕ್(ಅಫ್ಗಾನಿಸ್ತಾನ್): ಅಮೆರಿಕ ಸೇನೆಯ ಅಚಾತುರ್ಯದಿಂದ 16 ಅಫ್ಗಾನ್ ಪೊಲೀಸರು ಮೃತಪಟ್ಟಿರುವ ಘಟನೆ ಗೇರೆಸ್ಕ್ ಜಿಲ್ಲೆಯ ಹೆಲ್ಮೆಂಡ್ ಪ್ರಾಂತ್ಯದಲ್ಲಿ ನಡೆದಿದೆ. 
ಅಮೆರಿಕ ಸೇನೆ ಗೇರೆಸ್ಕ್ ಜಿಲ್ಲೆಯ ಪಾರ್ಜೋ ಗ್ರಾಮದಲ್ಲಿ ವಾಯುದಾಳಿ ನಡೆಸುತ್ತಿತ್ತು. ಈ ವಾಯುದಾಳಿಯಲ್ಲಿ 16 ಮಂದಿ ಪೊಲೀಸರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ. 
ವಾಯುದಾಳಿ ಕುರಿತಂತೆ ಅಮೆರಿಕ ಸೇನೆ ಸ್ಪಷ್ಟಪಡಿಸಿದೆ. ಜತೆಗೆ ವಾಯುದಾಳಿಯಲ್ಲಿ ಮೃತಪಟ್ಟ ಅಫ್ಗಾನ್ ಪೊಲೀಸರ ಕುಟುಂಬಸ್ಥರಿಗೆ ಸ್ವಾಂತನ ಹೇಳಿದೆ. ಈ ದುರಾದೃಷ್ಟಕರ ಘಟನೆಯಿಂದ ಮೃತ ಪೊಲೀಸರ ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com