ಕೇವಲ ಜಾಹಿರಾತುಗಳಲ್ಲಿ ಮಾತ್ರ 'ಅಚ್ಛೇ ದಿನ್': ಉದ್ಧವ್ ಠಾಕ್ರೆ
ಬಿಜೆಪಿ ವಿರುದ್ಧ ಮತ್ತೆ ಶಿವಸೇನೆ ಕಿಡಿಕಾರಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ 'ಅಚ್ಛೇ ದಿನ್" ಕೇವಲ ಸರ್ಕಾರ ಜಾಹೀರಾತುಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ಸತ್ಯ ಮಾತ್ರ ಭಿನ್ನವಾಗಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ...
ಮುಂಬೈ: ಬಿಜೆಪಿ ವಿರುದ್ಧ ಮತ್ತೆ ಶಿವಸೇನೆ ಕಿಡಿಕಾರಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ 'ಅಚ್ಛೇ ದಿನ್" ಕೇವಲ ಸರ್ಕಾರ ಜಾಹೀರಾತುಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ಸತ್ಯ ಮಾತ್ರ ಭಿನ್ನವಾಗಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕೇಂದ್ರದ ಆಡಳಿತಾರೂಢ ಎನ್ ಡಿಎ ಪಕ್ಷದೊಂದಿಗೆ ಮಿತ್ರತ್ವವನ್ನು ಹೊಂದಿದ್ದರು, ಸರ್ಕಾರದ ತಪ್ಪುಗಳ ವಿರುದ್ಧ ಮಾತನಾಡಲು ನಾನು ಹಿಂಜರಿಯುವುದಿಲ್ಲ. ಸರ್ಕಾರ ಕೆಲ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅದು ಸರಿಯಿಲ್ಲ ಎಂದು ಹೇಳಿದ್ದಾರೆ.
ಕಳೆದ ನಾಲ್ಕು ತಿಂಗಳುಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡವರಿಗೆ ಸರ್ಕಾರ ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
ಅಚ್ಛೇ ದಿನ್ ಇಂದು ಸರ್ಕಾರದ ಜಾಹೀರಾತುಗಳಿಗಷ್ಟೇ ಸೀಮಿತವಾಗಿದೆ. ದೇಶದಲ್ಲಿ ಪ್ರಧಾನಮಂತ್ರಿಗಳ ಆಶಯಗಳಂತೆಯೇ ಎಲ್ಲವೂ ನಡೆಯುತ್ತಿದೆ ಎಂದಾದರೆ ದೇಶದಲ್ಲಿ ನಮಗೆ ಪ್ರಜಾಪ್ರಭುತ್ವನ್ನು ಹೊಂದಿದ್ದೇವೆಂದು ಎನಿಸುತ್ತದೆಯೇ? ಕೇಂದ್ರದಲ್ಲಿ ಅಧಿಕಾರವನ್ನು ವಿಕೇಂದ್ರೀಕರಿಸುವ ಬದಲು ಪ್ರಧಾನಿ ಮೋದಿ ಕೇಂದ್ರೀಕರಿಸುತ್ತಿದ್ದಾರೆ. ದೇಶದಲ್ಲಿರುವ ಸ್ವಾತಂತ್ರ್ಯವನ್ನು ದೂರ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.