ಡೊಕ್ಲಾಮ್ ವಿವಾದಕ್ಕೆ ಭಾರತವೇ ಕಾರಣ, ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕು: ಚೀನಾ ವಿದೇಶಾಂಗ ಸಚಿವ
ಸಿಕ್ಕಿಂ ನ ಡೊಕ್ಲಾಮ್ ಗಡಿಯಲ್ಲಿ ಉಂಟಾಗಿರುವ ವಿವಾದಕ್ಕೆ ಭಾರತವೇ ಕಾರಣ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಆರೋಪಿಸಿದ್ದು, ಭಾರತ ತನ್ನ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು...
ಬೀಜಿಂಗ್: ಸಿಕ್ಕಿಂ ನ ಡೊಕ್ಲಾಮ್ ಗಡಿಯಲ್ಲಿ ಉಂಟಾಗಿರುವ ವಿವಾದಕ್ಕೆ ಭಾರತವೇ ಕಾರಣ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಆರೋಪಿಸಿದ್ದು, ಭಾರತ ತನ್ನ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಎಂದು ಆಗ್ರಹಿಸಿದ್ದಾರೆ.
ಗಡಿಯಲ್ಲಿ ಉಂಟಾಗಿರುವ ವಿವಾದದ ಸರಿ ತಪ್ಪುಗಳು ಸ್ಪಷ್ಟವಾಗಿವೆ. ಇದಕ್ಕೆ ಪೂರಕವಾಗಿ ಚೀನಾದ ಸೇನಾ ಪಡೆಗಳು ಭಾರತದ ಗಡಿಯೊಳಗೆ ಪ್ರವೇಶ ಮಾಡಿಲ್ಲ ಎಂದು ಭಾರತದ ಅಧಿಕಾರಿಗಳೇ ಹೇಳಿದ್ದು ತಾವೇ ಚೀನಾ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದ್ದೇವೆ ಎಂಬುದನ್ನು ಒಪ್ಪಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಡೊಕ್ಲಾಮ್ ನಲ್ಲಿ ವಿವಾದ ಉಂಟಾಗುತ್ತಿದ್ದಂತೆಯೇ ಚೀನಾ ಟಿಬೆಟ್ ನಲ್ಲಿ ಸೇನೆಯ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದು, ಸೇನಾ ತಾಲೀಮನ್ನೂ ನಡೆಸುತ್ತಿದ್ದು ಈಗ ಚೀನಾದ ವಿದೇಶಾಂಗ ಸಚಿವರು ಡೊಕ್ಲಾಮ್ ವಿವಾದಕ್ಕೆ ಭಾರತವೇ ಕಾರಣ ಎಂದು ಆರೋಪಿಸಿದ್ದಾರೆ.