ಅಕ್ರಮ ಹಣ ವರ್ಗಾವಣೆ ಪ್ರಕರಣ: ಪ್ರತ್ಯೇಕತಾವಾದಿ ನಾಯಕ ಶಬ್ಬೀರ್ ಶಾ ಬಂಧನ

ಹುರಿಯತ್ ಪ್ರತ್ಯೇಕತಾವಾದಿ ಸೈಯದ್ ಅಳಿ ಶಾ ಗಿಲಾನಿ ಅಳಿಯ ಸೇರಿ 7 ಮಂದಿಯನ್ನು ಬಂಧಿಸಿದ ಬೆನ್ನಲ್ಲೇ, ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಶಬ್ಬೀರ್ ಶಾ ಮತ್ತು ಯಾಸಿನ್ ಮಲಿಕ್ ನನ್ನು ಕಾಶ್ಮೀರ ಪೊಲೀಸರು ಮಂಗಳವಾರ...
ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಶಬ್ಬೀರ್ ಶಾ
ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಶಬ್ಬೀರ್ ಶಾ
ಶ್ರೀನಗರ: ಹುರಿಯತ್ ಪ್ರತ್ಯೇಕತಾವಾದಿ ಸೈಯದ್ ಅಳಿ ಶಾ ಗಿಲಾನಿ ಅಳಿಯ ಸೇರಿ 7 ಮಂದಿಯನ್ನು ಬಂಧಿಸಿದ ಬೆನ್ನಲ್ಲೇ, ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಶಬ್ಬೀರ್ ಶಾ ಮತ್ತು ಯಾಸಿನ್ ಮಲಿಕ್ ನನ್ನು ಕಾಶ್ಮೀರ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ. 
ಶಬ್ಬೀರ್ ಶಾ, ಜಮ್ಮು ಮತ್ತು ಕಾಶ್ಮೀರ ಡೆಮಾಕ್ರಾಟಿಕ್ ಫ್ರೀಡಂ ಪಾರ್ಟಿಯ ಸ್ಥಾಪಕನಾಗಿದ್ದಾನೆ. 10 ವರ್ಷ ಹಳೆಯ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. 
ಶ್ರೀನಗರದಲ್ಲಿ ಶಬ್ಬೀರ್ ಶಾನನ್ನು ಬಂಧನಕ್ಕೊಳಪಡಿಸಲಾಗಿತ್ತು. ಬುಧವಾರ ದೆಹಲಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಈ ಹಿಂದೆ ತನಿಖೆಗೆ ಹಾಜರಾಗುವಂತೆ ಹಲವು ಬಾರಿ ಶಾಗೆ ಸಮನ್ಸ್ ಜಾರಿ ಮಾಡಿದೆ. ಆದರೆ, ಇದಾವುದಕ್ಕೂ ಶಾ ಪ್ರತಿಕ್ರಿಯೆಗಳನ್ನು ನೀಡದ ಹಿನ್ನಲೆಯಲ್ಲಿ ದೆಹಲಿ ನ್ಯಾಯಾಲಯ ಶಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಇದರಂತೆ ಕಳೆದ ರಾತ್ರಿ ಶಬ್ಬೀರ್ ಶಾನನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. 
ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ಶಾ, ನನ್ನ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕರಣ ರಾಜಕೀಯ ಪ್ರೇರಿತವಾದ್ದು ಎಂದು ಹೇಳಿದ್ದಾರೆ. 
ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಸ್ಥಾಪಕ ಯಾಸಿನ್ ಮಲಿಕ್ ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com