ನಿಂದನಾತ್ಮಕ ಪದ ಬಳಕೆ ಮಾಡುವಂತೆ ಹೇಳಿದ್ದು ಕೇಜ್ರಿವಾಲ್: ಜೇಟ್ಲಿಗೆ ಜೇಠ್ಮಲಾನಿ

ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಪರವಾಗಿ ವಕಾಲತ್ತು ವಹಿಸಿ ನಂತರ ಹಿಂದೆ ಸರಿದಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿಯವರು ಅರವಿಂದ ಕೇಜ್ರಿವಾಲ್...
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಹಿರಿಯ ವಕೀಲ ರಾಮ್ ಜೇಠ್ಮಲಾನಿ
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಹಿರಿಯ ವಕೀಲ ರಾಮ್ ಜೇಠ್ಮಲಾನಿ
ನವದೆಹಲಿ: ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಪರವಾಗಿ ವಕಾಲತ್ತು ವಹಿಸಿ ನಂತರ ಹಿಂದೆ ಸರಿದಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿಯವರು ಅರವಿಂದ ಕೇಜ್ರಿವಾಲ್ ವಿರುದ್ಧ ತಿರುಗಿಬಿದ್ದಿದ್ದಾರೆ. 
ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಪತ್ರ ಬರೆದಿರುವ ಜೇಠ್ಮಲಾನಿಯವರು, ತಮ್ಮ ವಿರುದ್ಧ ಬಳಕೆ ಮಾಡಲಾಗಿದ್ದ 'ಮೋಸಗಾರ' ಹೇಳಿಕೆ ನನ್ನದಲ್ಲ. ಸ್ವತಃ ಕೇಜ್ರಿವಾಲ್ ಅವರೇ ನಿಂದನಾತ್ಮಕ ಪದ ಬಳಕೆ ಮಾಡುವಂತೆ ನನಗೆ ಸೂಚಿಸಿದ್ದರು ಎಂದು ಹೇಳಿಕೊಂಡಿದ್ದಾರೆಂದು ಖಾಸಗಿ ಮಾಧ್ಯಮವೊಂದು ತನ್ನ ವರದಿಯಲ್ಲಿ ತಿಳಿಸಿದೆ. 
ಜುಲೈ.20 ರಂದು ಜೇಠ್ಮಲಾನಿಯವರು ಕೇಜ್ರಿವಾಲ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಕಾನೂನು ಸಲಹೆಗಾರರ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಹಣಕಾಸು ಸಚಿವರ ವಿರುದ್ಧ ಇನ್ನಷ್ಟು ಕೆಟ್ಟ ಪದ ಬಳಸುವಂತೆ ಸ್ವತಃ ಕೇಜ್ರಿವಾಲ್ ಅವರೇ ಸೂಚಿಸಿದ್ದರು ಎಂಬುದು ಬಹಿರಂಗಗೊಂಡಿದೆ. 
ಜೇಟ್ಲಿಯವರು ನಿಮ್ಮ ವಿರುದ್ಧ ಮೊದಲ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾಗ ನೀವು ನನ್ನ ಸೇವೆಯನ್ನು ಬಯಸಿದ್ದಿರಿ. ಅಂತಹ ನಿಂದನಾತ್ಮಕ ಪದಗಳನ್ನು ಎಷ್ಟು ಬಾರಿ ಬಳಸಿದ್ದಿರಿ ಎಂಬುದು ನಿಮಗೇ ಗೊತ್ತಿದೆ ಎಂದು ಹೇಳಿಕೊಂಡಿದ್ದಾರೆ. 
ಈ ಹಿಂದೆ ವಿಚಾರಣೆ ವೇಳೆ ಜೇಟ್ಲಿಯವರ ವಿರುದ್ಧ ಜೇಠ್ಮಲಾನಿಯವರೇ ನಿಂದನಾತ್ಮಕ ಪದ ಬಳಕೆ ಮಾಡಿದ್ದರು ಎಂಬ ಕೇಜ್ರಿವಾಲ್ ಅವರ ಹೇಳಿಕೆ ಜೇಠ್ಮಲಾನಿಯವರನ್ನು ತೀವ್ರವಾಗಿ ಕೇರಳಿಸಿತ್ತು. ಹೀಗಾಗಿ ಕೇಜ್ರಿವಾಲ್ ವಿರುದ್ಧ ತಿರುಗಿಬಿದ್ದಿರುವ ಅವರು ಪ್ರಕರಣ ಸಂಬಂಧ ವಹಿಸಿದ್ದ ವಕಾಲತ್ತನ್ನು ಹಿಂದಕ್ಕೆ ಪಡೆದಿದ್ದರು. 
ಇದೀಗ ಹೇಳಿಕೆ ಸಂಬಂಧ ಜೇಟ್ಲಿಯವರಿಗೆ ಪತ್ರ ಬರೆದಿರುವ ಅವರು, ವಿಚಾರಣೆ ವೇಳೆ ಬಳಕೆ ಮಾಡಿದ್ದ ಪದಗಳು ನನ್ನದಲ್ಲ, ಡಿಡಿಸಿಎ ಹಗರಣದ ಪ್ರಸ್ತಾಪ ಮಾಡುತ್ತಾ ನಿಂದನಾತ್ಮಕ ಪದ ಬಳಕೆ ಮಾಡುವಂತೆ ಸ್ವತಃ ಕೇಜ್ರಿವಾಲ್ ಅವರೇ ಸೂಚಿಸಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com