ಬಿಸಿಲ ಧಗೆಗೆ ಕಂಗೆಟ್ಟು ಜಿಗಿದು ಕಾರಿನೊಳಗೆ ಸಿಲುಕಿದ ಕುದುರೆ

ರಾಜಸ್ತಾನದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಿಸಿಲಿನ ಧಗೆ ತಾಳಲಾರದ ಕುದುರೆಯೊಂದು ದಿಕ್ಕೆಟ್ಟು ಓಡಿ ಕಾರಿನ ಮೇಲೆ ಜಿಗಿದು, ಕಾರಿನೊಳಗೆ ಸಿಲುಕಿ ಹಾಕಿಕೊಂಡಿರುವ...
ಬಿಸಿಲ ಧಗೆಗೆ ಕಂಗೆಟ್ಟು ಜಿಗಿದು ಕಾರಿನೊಳಗೆ ಸಿಲುಕಿದ ಕುದುರೆ
ಬಿಸಿಲ ಧಗೆಗೆ ಕಂಗೆಟ್ಟು ಜಿಗಿದು ಕಾರಿನೊಳಗೆ ಸಿಲುಕಿದ ಕುದುರೆ
ಜೈಪುರ: ರಾಜಸ್ತಾನದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಿಸಿಲಿನ ಧಗೆ ತಾಳಲಾರದ ಕುದುರೆಯೊಂದು ದಿಕ್ಕೆಟ್ಟು ಓಡಿ ಕಾರಿನ ಮೇಲೆ ಜಿಗಿದು, ಕಾರಿನೊಳಗೆ ಸಿಲುಕಿ ಹಾಕಿಕೊಂಡಿರುವ ಘಟನೆಯ ಜೈಪುರದಲ್ಲಿ ನಡೆದಿದೆ. 
ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದೆ. ಕುದುರೆ ಸವಾರ ರಸ್ತೆಯೊಂದರಲ್ಲಿ ಕುದುರೆಯನ್ನು ಕಟ್ಟಿದ್ದಾನೆ. ಸ್ಥಳದಲ್ಲಿ ಅತೀವ ಬಿಸಿಲಿನೊಂದಿಗೆ, ವಾಹನಗಳ ಶಬ್ಧ ಕೂಡ ಹೆಚ್ಚಾಗಿತ್ತು. ಇದರಿಂದಾಗಿ ಕಂಗೆಟ್ಟ ಕುದುರೆ ಕಂಗೆಟ್ಟು ದಿಕ್ಕಾಪಾಲಾಗಿ ಓಡಲು ಆರಂಭಿಸಿದೆ. ಅಡ್ಡ ಬಂದಿರುವ ಕಾರಿನ ಮೇಲೆ ಕುದುರೆ ಜಿಗಿದಿದೆ. ಈ ವೇಳೆ ಕಾರಿನ ಮುಂಭಾಗದ ಗಾಜು ಪುಡಿಪುಡಿಯಾಗಿ ಕುದುರೆ ಕಾರಿನೊಳಗೆ ಸಿಲುಕಿ ಹಾಕಿಕೊಂಡಿದೆ. 
ಕುದುರೆ ಕಾರಿನೊಳಗೆ ಸಿಲುಕಿ ಹಾಕಿಕೊಂಡಿರುವುದನ್ನು ಕಂಡ ಸ್ಥಳೀಯರು ಆರಂಭದಲ್ಲಿ ಏನು ಮಾಡಬೇಕೆಂಬುದನ್ನು ತಿಳಿಯದೆ ಕುದುರೆಯನ್ನು ನೋಡಲು ಆರಂಭಿಸಿದ್ದಾರೆ. ನಂತರ ನಿಧಾನಗತಿಯಲ್ಲಿ ಒಬ್ಬೊಬ್ಬರಾಗಿ ಬಂದು ಕಾರಿನ ಚಾಲಕ ಹಾಗೂ ಕುದುರೆಯನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಕಾರು ಚಾಲಕ ಪಂಕಜ್ ಜೋಶಿ ಎಂಬುವವರಿಗೆ ಗಾಯಗಳಾಗಿವೆ. ಕುದುರೆಗೂ ಕೂಡ ಗಾಯಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com