ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೆಇಇ 2017ರ ಫಲಿತಾಂಶ ಪ್ರಕಟ: ವಿದ್ಯಾರ್ಥಿಗಳು ತಿಳಿದಿರಬೇಕಾದ ಅಂಶಗಳು

ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಪರೀಕ್ಷೆ 2017ರ ಫಲಿತಾಂಶ ಇಂದು ಬೆಳಗ್ಗೆ 10 ಗಂಟೆಗೆ...
ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಪರೀಕ್ಷೆ 2017ರ ಫಲಿತಾಂಶ ಇಂದು ಬೆಳಗ್ಗೆ 10  ಗಂಟೆಗೆ ಪ್ರಕಟಗೊಂಡಿದೆ.
ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ)ಯಲ್ಲಿ ಪ್ರವೇಶ ಪಡೆಯಲು ಜೆಇಇ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು results.jeeadv.ac.in ಹಾಗೂ www.jeeadv.ac.in ನಲ್ಲಿ ವೀಕ್ಷಿಸಬಹುದು.
ಕಳೆದ ತಿಂಗಳು 21ರಂದು ನಡೆದ ಪರೀಕ್ಷೆಗೆ ಕನಿಷ್ಠ 1.7 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.
ಮದ್ರಾಸ್ ನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಭಾರತ ಮಟ್ಟದ ರ್ಯಾಂಕ್ ಮತ್ತು ವಿಭಾಗಾವಾರು ರ್ಯಾಂಕುಗಳ ವಿವರಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. 

ಐಐಟಿ, ಎನ್ಐಟಿ ಮತ್ತು ಅತರ ಶೈಕ್ಷಣಿಕ ಸಂಸ್ಥೆಗಳ ಪ್ರವೇಶದ ಮುಂದಿನ ಹಂತಕ್ಕೆ ಜೆಇಇ ಅಡ್ವಾನ್ಸ್ ಡ್ ಮೂಲ ಹೆಜ್ಜೆಯಾಗಿದೆ. ಇನ್ನು ಜೆಇಇ ಮುಖ್ಯ ಪರೀಕ್ಷೆ ನಡೆಯಲಿದೆ. ಅದನ್ನು ಜೆಒಎಸ್ಎಎ ಎಂದು ಕರೆಯುತ್ತಾರೆ.

ಈ ವರ್ಷ 97  ಶಿಕ್ಷಣ ಸಂಸ್ಥೆಗಳು ಜೆಒಎಸ್ಎಎ 2017ರಲ್ಲಿ ಭಾಗವಹಿಸಲಿದ್ದಾರೆ. ಅವುಗಳಲ್ಲಿ 23 ಐಐಟಿಗಳು ಕೂಡ ಒಳಗೊಂಡಿವೆ. ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲು 600ಕ್ಕೂ ಹೆಚ್ಚು ವಿಷಯಗಳಿವೆ.

ಆಯ್ಕೆ ಭರ್ತಿ ಪ್ರಕ್ರಿಯೆ ಇದೇ 15ರಂದು ಆರಂಭವಾಗಿ 26ರವರೆಗೆ ನಡೆಯಲಿದೆ. ಮೊದಲ ಹಂತದ ಸೀಟು ಹಂಚಿಕೆ ಇದೇ 28ಕ್ಕೆ ಆರಂಭವಾಗಿ 7ನೇ ಸುತ್ತಿನ ಸೀಟು ಹಂಚಿಕೆ ಜುಲೈ 18ರಂದು ಮುಕ್ತಾಯಗೊಳ್ಳಲಿದ್ದು ಸಂಪೂರ್ಣ ಪ್ರಕ್ರಿಯೆ ಜುಲೈ 19ರಂದು ಮುಕ್ತಾಯವಾಗಲಿದೆ.

ಜೆಒಎಸ್ಎಎ 2017, ಏನಿದು: ಜಂಟಿ ಸೀಟು ಹಂಚಿಕೆ ಪ್ರಾಧಿಕಾರ(ಜೆಒಎಸ್ಎಎ)ನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸ್ಥಾಪಿಸಿದೆ. 2017-18ನೇ ಸಾಲಿನಲ್ಲಿ ದೇಶದ 97 ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸೀಟು ಹಂಚಿಕೆಯನ್ನು ನಿರ್ವಹಿಸಿ ನಿಯಂತ್ರಿಸುತ್ತದೆ. ಈ ಶಿಕ್ಷಣ ಸಂಸ್ಥೆಗಳಲ್ಲಿ 23 ಐಐಟಿಗಳು, 31 ಎನ್ಐಟಿಗಳು, 23 ಐಐಐಟಿಗಳು ಮತ್ತು 20 ಇತರ ಸರ್ಕಾರ ಸರ್ಕಾರ ಫಂಡ್ಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಗಳು ಒಳಗೊಂಡಿವೆ. ಒಂದೇ ವೇದಿಕೆಯಡಿ ಈ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿ ನೀಡಲಾಗುತ್ತದೆ.
ಐಐಟಿ ಮತ್ತು ಎನ್ಐಟಿಗಳಲ್ಲಿ  ಅರ್ಜಿ ಸಲ್ಲಿಕೆ: ಜೆಇಇ ಅಡ್ವಾನ್ಸ್ ಡ್ ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಮಾಡಿಕೊಳ್ಳಬಹುದು.

ಐಐಟಿ ಹೊರತುಪಡಿಸಿ ಎನ್ ಐಟಿ ವ್ಯವಸ್ಥೆಯಲ್ಲಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳು ಸೀಟು  ಹಂಚಿಕೆಯಲ್ಲಿ ಭಾಗವಹಿಸಬಹುದು.

Related Stories

No stories found.

Advertisement

X
Kannada Prabha
www.kannadaprabha.com