ತ್ರಿವಳಿ ತಲಾಖ್ ನೀಡಿದ ವ್ಯಕ್ತಿಗೆ 2 ಲಕ್ಷ ರು. ದಂಡ ವಿಧಿಸಿದ ಉ.ಪ್ರದೇಶ ಪಂಚಾಯತಿ

ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಉತ್ತರ ಪ್ರದೇಶದ ಪಂಚಾಯಿತಿಯೊಂದು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಖನೌ: ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಉತ್ತರ ಪ್ರದೇಶದ ಪಂಚಾಯಿತಿಯೊಂದು ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡಿದ ಮುಸ್ಲಿಂ ವ್ಯಕ್ತಿ ಎರಡು ಲಕ್ಷ ರುಪಾಯಿ ದಂಡ ವಿಧಿಸಿದೆ. ಅಲ್ಲದೆ ಪತ್ನಿಗೆ 60 ಸಾವಿರ ರುಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.
ಉತ್ತರ ಪ್ರದೇಶದ ಸಂಭಾಲದ ರೈಸತಿ ಪ್ರದೇಶದಲ್ಲಿರುವ ಮದರ್ಸಾ ಖಲೀಲ್-ಉಲ್-ಉಲೂಮ್ ನ ತುರ್ಕ ಸಮುದಾಯದ ಪಂಚಾಯತಿ ನಿನ್ನೆ ಈ ತಿರ್ಪು ನೀಡಿದ್ದು, ಈ ವೇಳೆ ಗ್ರಾಮದ 52 ಸದಸ್ಯರು ಹಾಜರಿದ್ದರು.
ಇದೇ ವೇಳೆ ವರನಿಗೆ ನೀಡಿದ್ದ ವರದಕ್ಷಿಣೆಯನ್ನು ವಧುವಿನ ಕುಟುಂಬಕ್ಕೆ ಮರಳಿಸಲು ಸಹಾಯ ಮಾಡುವುದಾಗಿ ಪಂಚಾಯತಿ ಹೇಳಿದೆ.
45 ವರ್ಷದ ವ್ಯಕ್ತಿಯೊಬ್ಬರು 10 ದಿನಗಳ ಹಿಂದಷ್ಟೇ 22 ವರ್ಷ ಯುವತಿಯೊಂದಿಗೆ ಮದುವೆಯಾಗಿದ್ದರು. ಆದರೆ ಇಬ್ಬರು ಮಧ್ಯೆ ಹೊಂದಾಣಿಕೆಯಿಲ್ಲದ ಕಾರಣ ಪತಿ ಪತ್ನಿಗೆ ಮೂರು ಬಾರಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡಿದ್ದರು. 
ಯುವತಿ ಕುಟುಂಬ ಈ ವಿಚಾರವನ್ನು ತುರ್ಕ ಪಂಚಾಯತಿಗೆ ತೆಗೆದುಕೊಂಡು ಹೋಗಿತ್ತು. ವಿಚಾರಣೆ ನಡೆಸಿದ ಪಂಚಾಯತಿ ಪತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದು, 2 ಲಕ್ಷ ರುಪಾಯಿ ದಂಡ ವಿಧಿಸಿದೆ. ಅಲ್ಲದೆ ಈ ಕೂಡಲೇ ದಂಡದ ಹಣವನ್ನು ನೀಡುವಂತೆ ಆದೇಶಿಸಲಾಗಿದೆ ಎಂದು ತುರ್ಕ ಸಮೂದಾಯದ ಪಂಚಾಯತಿಯ ಸಂಯೋಜಕ ಶಾಹಿದ್ ಹುಸೇನ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com