ಭಾರತದಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಗುರಿಯನ್ನು ಈಡೇರಿಸಲು ಭಾರತೀಯ ಅಮೆರಿಕಾ ಸಮುದಾಯದವರು ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು. ಕೈಗೆಟಕುವ ದರದಲ್ಲಿ ಶೌಚಾಲಯ ನಿರ್ಮಿಸಬೇಕೆಂದು ಹೇಳಿದರು. ವರ್ಜೀನಿಯಾದ ರಿಪಬ್ಲಿಕನ್ ನಾಯಕ ಎಡ್ ಗಿಲೆಸ್ಪಿ ಸ್ವತಃ ಸುಲಭ್ ಇಂಟರ್ ನ್ಯಾಷನಲ್ ಟೆಕ್ನಾಲಜಿಯಲ್ಲಿ ಆಸಕ್ತಿ ತಳೆದಿದ್ದು ಅಮೆರಿಕದಲ್ಲಿ ಭಾರತೀಯ ಅಮೆರಿಕಾ ಸಮುದಾಯ ಹೊಂದಿರುವ ಮಹತ್ವದ ಪಾತ್ರದ ಬಗ್ಗೆ ಉಲ್ಲೇಖಿಸಿದರು. ಅಮೆರಿಕ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ಹೇಳಿದರು.