ಬಿಎಸ್ಎಫ್ ಸಭೆಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರ: ತನಿಖೆಗೆ ಆದೇಶ

ಸೇನಾ ವಿಚಾರಗಳ ಕುರಿತು ಚರ್ಚೆಗಾಗಿ ಏರ್ಪಡಿಸಿದ್ದ ಸಭೆಯಲ್ಲೇ ಅಧಿಕಾರಿಯೊಬ್ಬ ಲ್ಯಾಪ್ ಟಾಪ್ ನಲ್ಲಿ ಅಶ್ಲೀಲ ಚಿತ್ರದ ವಿಡಿಯೋಗಳು ಪ್ರಸಾರವಾದ ಘಟನೆ ಪಂಜಾಬ್'ನ ಫಿರೋಜ್ಪುರ ಜಿಲ್ಲೆಯಲ್ಲಿರುವ 77 ಬೆಟಾಲಿಯನ್ ಪಡೆ ಮುಖ್ಯ ಕಚೇರಿಯಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಮೃತಸರ: ಸೇನಾ ವಿಚಾರಗಳ ಕುರಿತು ಚರ್ಚೆಗಾಗಿ ಏರ್ಪಡಿಸಿದ್ದ ಸಭೆಯಲ್ಲೇ ಅಧಿಕಾರಿಯೊಬ್ಬ ಲ್ಯಾಪ್ ಟಾಪ್ ನಲ್ಲಿ ಅಶ್ಲೀಲ ಚಿತ್ರದ ವಿಡಿಯೋಗಳು ಪ್ರಸಾರವಾದ ಘಟನೆ ಪಂಜಾಬ್'ನ ಫಿರೋಜ್ಪುರ ಜಿಲ್ಲೆಯಲ್ಲಿರುವ 77 ಬೆಟಾಲಿಯನ್ ಪಡೆ ಮುಖ್ಯ ಕಚೇರಿಯಲ್ಲಿ ಸೋಮವಾರ ನಡೆದಿದೆ. 
ಬಿಎಸ್ಎಫ್ ಯೋಧರು ವಿಚಾರಗಳ ಕುರಿತಂತೆ ಅಧಿಕಾರಿಗಳು ಸಭೆಯನ್ನು ನಡೆಸುತ್ತಿದ್ದರು. ಸಭೆಯಲ್ಲಿ ಅಧಿಕಾರಿಯೊಬ್ಬರು ತಮ್ಮ ಲ್ಯಾಪ್ ಟಾಪ್ ಮೂಲಕ ಪ್ರೆಸೆಂಟೇಷನ್ ನೀಡಲು ಮುಂದಾಗಿದ್ದಾರೆ. ಈ ವೇಳೆ ಅಶ್ಲೀಲ ವಿಡಿಯೋಗಳು ಪ್ರಸಾರವಾಗಿದೆ. ಸಭೆಯಲ್ಲಿ 8 ಮಹಿಳಾ ಸಿಬ್ಬಂದಿಗಳೂ ಕೂಡ ಭಾಗಿಯಾಗಿದ್ದರು. ಇದರಿಂದಾಗಿ ಭಾರತೀಯ ಗಡಿ ಭದ್ರತಾ ಸೇನೆ ಮುಜುಗರಕ್ಕೀಡಾಗುವಂತಹ ಪರಿಸ್ಥಿತಿ ಎದುರಾಗಿದೆ. 90 ಸೆಕೆಂಡ್ ಗಳ ಕಾಲ ವಿಡಿಯೋ ಪ್ರಸಾರವಾಗಿದೆ ಎಂದು ತಿಳಿಬಂದಿದೆ. 
ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದನ್ನು ಪಂಜಾಬ್ ಗಡಿಯ ಬಿಎಸ್ಎಫ್ ಐಜಿ ಮುಕುಲ್ ಗೋಯಲ್ ಅವರು ದೃಢಪಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ.
ಅಧಿಕಾರಿಯೊಬ್ಬ ಅಧಿಕೃತ ಲ್ಯಾಪ್ ಟಾಪ್ ನಲ್ಲಿ ಇಂತಹ ಕೆಟ್ಟ ಸಂಗ್ರಹಗಳಿರಬಾರದು. ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ತನಿಖೆಗೆ ಆದೇಶಿಸಿದ್ದೇವೆ. ತೇಜ್ ಬಹುದ್ದೂರ್ ಯಾದವ್ ಪ್ರಕರಣದ ಬಳಿಕ ಮುಜುಗರಕ್ಕೀಡಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com