ತಮಿಳುನಾಡು ವಿಧಾನಸಭೆ: ಗದ್ದಲದ ನಡುವೆಯೇ ಜಿಎಸ್ ಟಿ ಮಸೂದೆ ಅಂಗೀಕಾರ

ಶಾಸಕರಿಗೆ ಹಣದ ಆಮಿಷವೊಡ್ಡಿರುವ ಹಗರಣಕ್ಕೆ ಸಂಬಂಧಿಸಿದ ಕುಟುಕು ಕಾರ್ಯಾಚರಣೆ ವಿಷಯವಾಗಿ ತಮಿಳುನಾಡಿನ ವಿಧಾನಸಭೆಯಲ್ಲಿ ಗದ್ದಲ ಉಂಟಾಗಿದ್ದು, ಗದ್ದಲದ ನಡುವೆಯೇ ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸಲಾಗಿದೆ.
ತಮಿಳುನಾಡು ವಿಧಾನಸಭೆ
ತಮಿಳುನಾಡು ವಿಧಾನಸಭೆ
ಚೆನ್ನೈ: ಶಾಸಕರಿಗೆ ಹಣದ ಆಮಿಷವೊಡ್ಡಿರುವ ಹಗರಣಕ್ಕೆ ಸಂಬಂಧಿಸಿದ ಕುಟುಕು ಕಾರ್ಯಾಚರಣೆ ವಿಷಯವಾಗಿ ತಮಿಳುನಾಡಿನ ವಿಧಾನಸಭೆಯಲ್ಲಿ ಗದ್ದಲ ಉಂಟಾಗಿದ್ದು, ಗದ್ದಲದ ನಡುವೆಯೇ ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸಲಾಗಿದೆ. 
ಕ್ಯಾಷ್ ಫಾರ್ ಎಂಎಲ್ಎ ಹಗರಣದ ಸ್ಟಿಂಗ್ ಆಪರೇಷನ್ ವಿಷಯವನ್ನು ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ನಾಯಕ ಸ್ಟಾಲಿನ್ ಪ್ರಸ್ತಾಪಿಸಿದರು. ನಂತರ ಆಡಳಿತ ಪಕ್ಷ ಎಐಎಡಿಎಂಕೆ ಹಾಗೂ ಡಿಎಂಕೆ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಗದ್ದಲದ ನಡುವೆಯೇ ಜಿಎಸ್ ಟಿ ಮಸೂದೆಯನ್ನು ಮಂಡಿಸಿ, ಅಂಗೀಕಾರವನ್ನೂ ಪಡೆಯಲಾಯಿತು. 
ಹಗರಣದ ಕುಟುಕು ಕಾರ್ಯಾಚರಣೆ ವಿಚಾರಣೆ ಹಂತದಲ್ಲಿರುವುದರಿಂದ ಈ ಬಗ್ಗೆ ಚರ್ಚಿಸಲು ಅನುಮತಿ ನೀಡಲು ವಿಧಾನಸಭಾಧ್ಯಕ್ಷ ಡಿ ಧನ್ ಪಾಲ್ ನಿರಾಕರಿಸಿದರು. ವಿಧಾನಸಭಾಧ್ಯಕ್ಷರ ನಿಲುವನ್ನು ವಿರೋಧಿಸಿ, ಶಾಸಕರು ಮಾರಾಟಕ್ಕಿದ್ದಾರೆ ಎಂಬ ಭಿತ್ತಿ ಪತ್ರ ಹಿಡಿದು ಡಿಎಂಕೆ ಸದಸ್ಯರು ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com