ಭಾರತದೊಂದಿಗೆ ಕಪ್ಪುಹಣ ಮಾಹಿತಿ ವಿನಿಮಯಕ್ಕೆ ಸ್ವಿಸ್ ಒಪ್ಪಿಗೆ

ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೆರವಾಗಲು ಸ್ವಿಟ್ಜರ್ಲ್ಯಾಂಡ್ ಭಾರತ ಸೇರಿದಂತೆ ಇತರ ದೇಶಗಳೊಂದಿಗೆ ಹಣಕಾಸು ಖಾತೆಗಳ ಸ್ವಯಂಚಾಲಿತ...
ನರೇಂದ್ರ ಮೋದಿ
ನರೇಂದ್ರ ಮೋದಿ
ಬರ್ನ್/ನವದೆಹಲಿ: ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೆರವಾಗಲು ಸ್ವಿಟ್ಜರ್ಲ್ಯಾಂಡ್ ಭಾರತ ಸೇರಿದಂತೆ ಇತರ ದೇಶಗಳೊಂದಿಗೆ ಹಣಕಾಸು ಖಾತೆಗಳ ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆಗೆ ಒಪ್ಪಿಗೆ ನೀಡಿದ್ದು 2019ರಿಂದ ಅನ್ವಯವಾಗಲಿದೆ. 
ಭಾರತ ಸೇರಿದಂತೆ 40 ದೇಶಗಳ ಹಣಕಾಸು ಖಾತೆಗಳ ಸ್ವಯಂಚಾಲಿತ ಮಾಹಿತಿ ವಿನಿಮಯಕ್ಕೆ ಒಪ್ಪಿಗೆ ಸೂಚಿಸಿರುವ ಸ್ವಿಟ್ಜರ್ಲ್ಯಾಂಡ್ ತಾನು ವಿನಿಮಯಿಸುವ ಹಣಕಾಸು ಮಾಹಿತಿಗಳ ಪಾರದರ್ಶಕತೆ ಹಾಗೂ ಭದ್ರತೆಯನ್ನು ಕಡ್ಡಾಯವಾಗಿ ಕಾಪಾಡುವಂತೆ ಕಟ್ಟಪ್ಪಣೆ ಮಾಡಿದೆ. 
ಆಟೋಮ್ಯಾಟಿಕ್ ಎಕ್ಸ್ ಚೇಂಜ್ ಆಫ್ ಇನ್ ಫಾರ್ಮೇಶನ್ ಎಂಬ ಜಾಗತಿಕ ಒಡಂಬಡಿಕೆಗೆ ಸ್ವಿಸ್ ಫೆಡರಲ್ ಕೌನ್ಸಿಲ್ ಅನುಮೋದನೆ ನೀಡಿದ್ದು 2018ರಿಂದ ಇದನ್ನು ಜಾರಿಗೆ ತರಲು ಉದ್ದೇಶಿಸಲಾಗಿದ್ದು ಮೊದಲ ಕಂತಿನ ಮಾಹಿತಿಯನ್ನು 2019ರಲ್ಲಿ ವಿನಿಮಯ ಮಾಡಿಕೊಳ್ಳಲಿದೆ. 
ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಲಕ್ಷಾಂತರ ಕೋಟಿ ಕಪ್ಪು ಹಣವನ್ನು ಇಟ್ಟಿದ್ದಾರೆ ಎನ್ನಲಾಗಿದ್ದು ಅದನ್ನು ದೇಶಕ್ಕೆ ಮರಳಿ ತರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮುಖ್ಯ ಗುರಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com