ತೃಣಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪೊಲೀಸರು ಹಾಗೂ ಆಡಳಿತ ಮಂಡಳಿಯ ಬೆಂಬಲದೊಂದಿಗೆ ನನ್ನ ಮನೆಗೆ ನುಗ್ಗಿದ್ದಾರೆ. ಇದೊಂದು ರಾಜಕೀಯ ಆಟವಾಗಿದ್ದು, ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದೆ. ಸಿಪಿಐ(ಎಂ), ಟಿಎಂಸಿ ರಾಜಕೀಯ ಮಾಡುತ್ತಿರುವ ರೀತಿಯಗೂ ಬಿಜೆಪಿ ಮತ್ತು ಕಾಂಗ್ರೆಸ್ ಮಾಡುತ್ತಿರುವ ರಾಜಕೀಯಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಕೊನೆಯ ಹಂತದವರೆಗೂ ನಮ್ಮ ಹೋರಾಟ ಇದೇ ರೀತಿಯಲ್ಲಿಯೇ ಇರುತ್ತದೆ. ರಾಜ್ಯದಲ್ಲಿರುವ ಪ್ರತಿಯೊಬ್ಬರೂ ಇದೇ ರೀತಿಯಾಗಿ ಒಗ್ಗಟ್ಟಿನಿಂದ ಇರಬೇಕೆಂದು ತಿಳಿಸಿದ್ದಾರೆ.