ಡಾರ್ಜಿಲಿಂಗ್'ನಲ್ಲಿ ಪರಿಸ್ಥಿತಿ ಉದ್ವಿಗ್ನ: ಆರೋಗ್ಯ ಕೇಂದ್ರ, ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಪ್ರತ್ಯೇಕ ಗೋರ್ಖಾ ರಾಜ್ಯಕ್ಕಾಗಿ ಡಾರ್ಜಿಲಿಂಗ್ ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಆರೋಗ್ಯ ಕೇಂದ್ರ ಹಾಗೂ ಜಲ ಯೋಜನೆಗೆ ಸಂಬಂಧಿಸಿದಂತಹ ಸರ್ಕಾರಿ ಕಚೇರಿಗೆ ದುಷ್ಕರ್ಮಿಗಳ ಗುಂಪೊಂದು...
ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಡಾರ್ಜಿಲಿಂಗ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಜಿಜೆಎಂ
ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಡಾರ್ಜಿಲಿಂಗ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಜಿಜೆಎಂ
ಡಾರ್ಜಿಲಿಂಗ್: ಪ್ರತ್ಯೇಕ ಗೋರ್ಖಾ ರಾಜ್ಯಕ್ಕಾಗಿ ಡಾರ್ಜಿಲಿಂಗ್ ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಆರೋಗ್ಯ ಕೇಂದ್ರ ಹಾಗೂ ಜಲ ಯೋಜನೆಗೆ ಸಂಬಂಧಿಸಿದಂತಹ ಸರ್ಕಾರಿ ಕಚೇರಿಗೆ ದುಷ್ಕರ್ಮಿಗಳ ಗುಂಪೊಂದು ಬೆಂಕಿ ಹಚ್ಚಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. 
ಕಳೆದ ರಾತ್ರಿ ಲುಧಾಮದಲ್ಲಿರುವ ಆರೋಗ್ಯ ಕೇಂದ್ರ ಹಾಗೂ ರಿಂಬಿಕ್ ನಲ್ಲಿರುವ ಜಲ ಯೋಜನೆಯ ಸರ್ಕಾರಿ ಕಚೇರಿ ಬಂದಿರುವ ದುಷ್ಕರ್ಮಿಗಳ ತಂಡ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಬಳಿಕ ಡಾರ್ಜಿಲಿಂಗ್ ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಘಟನೆಯಲ್ಲಿ ಸಾವು-ನೋವು ಸಂಭವಿಸಿರುವ ಕುರಿತಂತೆ ಯಾವುದೇ ವರದಿಗಳಾಗಿಲ್ಲ. 
ನಿನ್ನೆಯಷ್ಟೇ ಜಿಜೆಎಂ ಮುಖ್ಯಸ್ಥ ಬಿಮಲ್ ಗುರುಂಗ್ ಕಚೇರಿಗೆ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. 
ಪ್ರಸ್ತುತ ಡಾರ್ಜಿಲಿಂಗ್ ನಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗುತ್ತಿದ್ದು, ಕೇಂದ್ರ ಗೃಹ ಸಚಿವಾಲಯ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com