ಬುರ್ಹಾನ್‌ ವನಿ ಹತ್ಯೆಗೆ ವರ್ಷ: ಮತ್ತಷ್ಟು ಉಗ್ರ ದಾಳಿ ಹಿನ್ನೆಲೆಯಲ್ಲಿ ಕಟ್ಟೆಚ್ಚರ

ಜಮ್ಮು ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಹಿಂಸಾಚಾರ ಪ್ರಮಾಣದಲ್ಲಿ ಏರಿಕೆಯಾಗಿದ್ದು ಜೂನ್ 23 ರಂದು ರಂಜಾನ್ ಹಬ್ಬವಿದ್ದು ಮತ್ತಷ್ಟು ದಾಳಿಯಾಗಬಹುದೆಂದು ...
ಬುರ್ಹಾನ್ ವನಿ
ಬುರ್ಹಾನ್ ವನಿ
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಹಿಂಸಾಚಾರ ಪ್ರಮಾಣದಲ್ಲಿ ಏರಿಕೆಯಾಗಿದ್ದು ಜೂನ್ 23 ರಂದು ರಂಜಾನ್ ಹಬ್ಬವಿದ್ದು ಮತ್ತಷ್ಟು ದಾಳಿಯಾಗಬಹುದೆಂದು ಭಾರತೀಯ ಸೇನೆ ಅಭಿಪ್ರಾಯ ಪಟ್ಟಿದೆ.
ಜೂನ್ 26 ಕ್ಕೆ ಈದ್ ನಂತರ ಉಗ್ರರ ಕೃತ್ಯಗಳು ಕಡಿಮೆಯಾಗಬಹುದೆಂದು ಸೇನೆ ನಿರೀಕ್ಷಿಸಿತ್ತು. ಆದರೆ ಜುಲೈ 8 ಕ್ಕೆ ಹಿಬ್ಜುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಹತ್ಯೆಯಾಗಿ ಒಂದು ವರ್ಷ ಕಳೆಯಲಿದ್ದು, ಆ ವೇಳೆ ಮತ್ತಷ್ಟು ಹಿಂಸಾಚಾರ ಹೆಚ್ಚಲಿದೆ ಎನ್ನಲಾಗಿದೆ.
ಕಳೆದ ವರ್ಷ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖಂಡ ಬುರ್ಹಾನ್ ವನಿಯನ್ನು ರಕ್ಷಣಾ ಪಡೆ ಹತ್ಯೆಗೈದಿದ್ದವು, ಈ ಹಿನ್ನೆಲೆಯಲ್ಲಿ  ಸುಮಾರು 5 ತಿಂಗಳಿಗೂ ಹೆಚ್ಚು ಸಮಯ ಹಿಂಸಾಚಾರ ಮತ್ತು ಪ್ರತಿಭಟನೆಗಳು ನಡೆದಿದ್ದವು.
ಬುರ್ಹಾನ್ ವನಿ ಹತ್ಯೆಯಾಗಿ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಹಿಂಸಾಚಾರ ಹಾಗೂ ದಾಳಿಗಳನ್ನು ತಡೆಗಟ್ಟಲು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಸೇನೆ 3 ಸಾವಿರ ಸೈನಿಕರನ್ನು ನಿಯೋಜಿಸಿದೆ. 
ಭಯೋತ್ಪಾದಕರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 3 ಬೆಟಾಲಿಯಾನ್ ನಿಯೋಜನೆ ಮಾಡಲಾಗಿದೆ. ಎಲ್ಲೆಲ್ಲಿ  ದಾಳಿ ನಡೆಯುವ ಸಾಧ್ಯತೆಯಿದೆಯೋ ಆ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ರಕ್ಷಣೆ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ,
ಈದ್ ನಂತರ ದಾಳಿ ನಡೆಸಲು ಸುಮಾರು 280 ಉಗ್ರರು ಕಾಯುತ್ತಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com