ಬಿಹಾರ: ಶುಲ್ಕ ನೀಡದ್ದಕ್ಕೆ ಬಾಲಕಿಯರ ಯೂನಿಫಾರ್ಮ್ ಬಿಚ್ಚಿ ಕ್ಲಾಸಿಂದ ಹೊರದಬ್ಬಿದ ಶಿಕ್ಷಕಿ

ಯೂನಿಫಾರ್ಮ್ ಗೆ ಶುಲ್ಕ ಪಾವತಿಸಲಿಲ್ಲವೆಂದು ಸಹೋದರಿಯರಾದ ಇಬ್ಬರು ವಿದ್ಯಾರ್ಥಿನಿಯರನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಗಸೂರು: ಯೂನಿಫಾರ್ಮ್ ಗೆ ಶುಲ್ಕ ಪಾವತಿಸಲಿಲ್ಲವೆಂದು ಸಹೋದರಿಯರಾದ ಇಬ್ಬರು ವಿದ್ಯಾರ್ಥಿನಿಯರನ್ನು ಖಾಸಗಿ ಶಾಲೆಯಿಂದ ಹೊರದೂಡಿದ ಘಟನೆ ಬಿಹಾರದ ಬೆಗುಸರೈ ಜಿಲ್ಲೆಯಲ್ಲಿ ನಡೆದಿದೆ.
ಒಂದು ಮತ್ತು 2ನೇ ತರಗತಿಯ ಬಾಲಕಿಯರ ತಂದೆ ನೀಡಿದ ದೂರಿನ ಮೇರೆಗೆ ಶಾಲೆಯ ಶಿಕ್ಷಕಿ ಮತ್ತು ಪ್ರಾಂಶುಪಾಲರನ್ನು ಬಂಧಿಸಲಾಗಿದೆ.
ಜಿಲ್ಲೆಯ ಕೊರಿಯಾ ಪಂಚಾಯತ್ ನ ಸಿಕ್ರೌಲಾ ಗ್ರಾಮದಲ್ಲಿ ಬಿ.ಆರ್.ಎಜುಕೇಶನ್ ಅಕಾಡೆಮಿ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೂ ಯೂನಿಫಾರ್ಮ್ ವಿತರಿಸಲಾಗುತ್ತದೆ. ವಿದ್ಯಾರ್ಥಿಗಳು ಅದಕ್ಕೆ ಶುಲ್ಕ ಪಾವತಿಸಬೇಕು. ಆದರೆ ಈ ವಿದ್ಯಾರ್ಥಿನಿಯರು ಶುಲ್ಕ ನೀಡಲಿಲ್ಲವೆಂದು ಶಿಕ್ಷಕಿ ತರಗತಿಯಿಂದ ಹೊರಹಾಕಿದ್ದರು.
ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ  ಬಾಲಕಿಯರ ತಂದೆ ಚುಂಚುನ್ ಸಾ, ನಿನ್ನೆ ಮಕ್ಕಳನ್ನು ಕರೆದುಕೊಂಡು ಬರಲೆಂದು ಶಾಲೆಗೆ ಹೋದಾಗ ಶಿಕ್ಷಕಿಯನ್ನು ಭೇಟಿಯಾಗುವಂತೆ ಹೇಳಲಾಗಿತ್ತು.ಶಿಕ್ಷಕಿಯನ್ನು ಭೇಟಿ ಮಾಡಿದಾಗ ಯೂನಿಫಾರ್ಮ್ ಶುಲ್ಕ ಪಾವತಿಸುವಂತೆ ಹೇಳಿದರು. ಸ್ವಲ್ಪ ಸಮಯಾವಕಾಶ ನೀಡುವಂತೆ ಕೇಳಿದ್ದೆ. ಆದರೆ ಮರುದಿನ ಮಕ್ಕಳು ಶಾಲೆಗೆ ಹೋದಾಗ ಎಲ್ಲರೆದುರೇ ಯೂನಿಫಾರ್ಮ್ ಬಿಚ್ಚಿ ಶಾಲೆಯಿಂದ ಹೊರಹಾಕಿದರು. ಈ ಬಗ್ಗೆ ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ್ದಕ್ಕೆ ಅವರು ಸ್ಪಂದಿಸಲಿಲ್ಲ. ಅದಕ್ಕಾಗಿ ಪೊಲೀಸರಿಗೆ ದೂರು ನೀಡಿದೆ ಎಂದು ಬಾಲಕಿಯರ ತಂದೆ ಹೇಳಿದ್ದಾರೆ.
ನಿನ್ನೆ ಪೊಲೀಸರು ಉಪ ವಿಭಾಗ ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್, ಪ್ರಾಂಶುಪಾಲರು ಹಾಗೂ ಶಿಕ್ಷಕಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆ ಸಂವೇದನಾರಹಿತವಾಗಿದ್ದು ಅಪರಾಧಿಗಳು ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ರಾಜ್ಯ ಶಿಕ್ಷಣ ಸಚಿವ ಅಶೋಕ್ ಚೌಧರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com