ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಾಗತಿಕ ಶಾಂತಿ ಸೂಚ್ಯಂಕ 2017: ಭಾರತಕ್ಕೆ 137ನೇ ರ್ಯಾಂಕ್, ದಕ್ಷಿಣ ಏಷ್ಯಾದಲ್ಲಿ ಭೂತಾನ್ ಅತ್ಯಂತ ಶಾಂತಿಯುತ ದೇಶ

ದಕ್ಷಿಣ ಏಷ್ಯಾದಲ್ಲಿ ಶಾಂತಿಯುತ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದು ಎಂದು ಪರಿಗಣಿಸಲಾಗಿದ್ದು...
ನವದೆಹಲಿ:  ದಕ್ಷಿಣ ಏಷ್ಯಾದಲ್ಲಿ ಶಾಂತಿಯುತ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದು ಎಂದು ಪರಿಗಣಿಸಲಾಗಿದ್ದು, ಇತ್ತೀಚಿನ ಸಮೀಕ್ಷೆ ಪ್ರಕಾರ, ಜಾಗತಿಕ ಮಟ್ಟದಲ್ಲಿ ಭಾರತ 137ನೇ ಸ್ಥಾನ ಹೊಂದಿದೆ.
ಜಾಗತಿಕ ಶಾಂತಿ ಸೂಚ್ಯಂಕ 2017 ನ್ನು ಆಸ್ಟ್ರೇಲಿಯಾ ಮೂಲದ ಅರ್ಥಶಾಸ್ತ್ರ ಮತ್ತು ಶಾಂತಿ ಸಂಸ್ಥೆ (ಐಇಪಿ) ತಯಾರು ಮಾಡಿದೆ.
13ನೇ ರ್ಯಾಂಕ್ ಗಳಿಸಿರುವ ಭೂತಾನ್ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಶಾಂತಿಯುತ ದೇಶ ಎಂದು ಹೇಳಲಾಗುತ್ತಿದೆ. ನಂತರದ ಸ್ಥಾನಗಳಲ್ಲಿ ಶ್ರೀಲಂಕಾಕ್ಕೆ 80ನೇ ಸ್ಥಾನ, ಬಾಂಗ್ಲಾದೇಶ 84ನೇ ರ್ಯಾಂಕ್, ಭಾರತ 137ನೇ ರ್ಯಾಂಕ್ ಮತ್ತು ಪಾಕಿಸ್ತಾನ 152ನೇ ರ್ಯಾಂಕ್ ಹಾಗೂ ಅಫ್ಘಾನಿಸ್ತಾನ 162ನೇ ರ್ಯಾಂಕ್ ಗಳಿಸಿದೆ.
2011ರಲ್ಲಿ ಸಿರಿಯಾ ಯುದ್ಧ ಆರಂಭವಾದ ನಂತರ ಯುದ್ಧ, ಹಿಂಸಾಚಾರ ಕಂಡಿದ್ದ ವಿಶ್ವದಲ್ಲಿ ಇತ್ತೀಚೆಗೆ ಶಾಂತಿ ನಿಧಾನವಾಗಿ ಮರುಕಳಿಸುತ್ತಿದೆ ಎಂದು ಸಿಡ್ನಿ ಮೂಲದ ವಿಚಾರ ವೇದಿಕೆ ತಿಳಿಸಿದೆ.
ಆದರೂ ಭಯೋತ್ಪಾದಕ ಕೃತ್ಯಗಳು ಈ ಸಮಯದಲ್ಲಿ ಹೆಚ್ಚಾಗಿದೆ. 2016ಕ್ಕಿಂತ 2017ರಲ್ಲಿ ವಿಶ್ವದಾದ್ಯಂತ ಶೇಕಡಾ 0.28ರಷ್ಟು ಶಾಂತಿ ಹೆಚ್ಚಾಗಿದೆ. 2008ರಿಂದ ಜಾಗತಿಕ ಮಟ್ಟದಲ್ಲಿನ ಶಾಂತಿ ಶೇಕಡಾ 0.28ರಷ್ಟು ಹೆಚ್ಚಾಗಿದ್ದು 93 ರಾಷ್ಟ್ರಗಳು ಸುಧಾರಣೆಯಾಗುತ್ತಿವೆ. 68 ದೇಶಗಳ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎನ್ನುತ್ತದೆ ವರದಿ.                              

Related Stories

No stories found.

Advertisement

X
Kannada Prabha
www.kannadaprabha.com