ಶ್ರೀನಗರ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಪಾಕಿಸ್ತಾನದ ಸಂಭ್ರಮಾಚರಣೆ ಮಿತಿ ಮೀರಿದ್ದು, ಭಾರತೀಯ ಸೇನೆಯನ್ನು ಉಲ್ಲೇಖಿಸಿ ಪಾಕ್ ಸೇನಾಧಿಕಾರಿಯೊಬ್ಬ ಕುಹಕವಾಡಿದ್ದಾನೆ.
ಪಾಕಿಸ್ತಾನ ಸೇನೆ ಕ್ರಿಕೆಟ್ ಗೆಲುವಿನ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಭಾರತದ ಬಗ್ಗೆ ಕುಹಕವಾಡಿದೆ. ಪಾಕ್ ಗೆಲುವಿನ ಬಳಿಕ ಬಲೂಚಿಸ್ತಾನದಲ್ಲಿ ಸ್ಥಳೀಯರು ಸಂಭ್ರಮಾಚರಣೆಯಲ್ಲಿ ತೊಡಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪಾಕ್ ಸೇನೆ,ಸೇನಾ ಮುಖ್ಯಸ್ಥ ಖಮರ್ ಜಾವೇ ದ್ ಬಜ್ವಾ ಅವರು ಫೋಟೋ ಜತೆಗೆ ‘ವಿಕ್ಟರಿ' ಸಂಕೇತವನ್ನು ಪ್ರದರ್ಶಿಸಿರುವ ಸೇನೆಯು, ಸೈನಿಕರು ನೃತ್ಯ ಮಾಡುತ್ತಿರುವ ಫೋಟೋ ಹಾಕಿಕೊಂಡಿದೆ. ಸೇನಾ ವಕ್ತಾರ ಮೇ.ಜ. ಆಸಿಫ್ ಗಫರ್ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಗಫರ್ ಅವರು ಶ್ರೀನಗರದಲ್ಲಿ ಸ್ಥಳೀಯರು ಪಾಕ್ ಗೆಲುವಿನ ಬಗ್ಗೆ ಸಂಭ್ರಮಿಸುತ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
And this is Our Baluchistan. "To whom it may concern". Lay off!#HumSabKaPakistan
Advertisement