ಶೇ.62 ಅಮೆರಿಕನ್ನರ ದಾಖಲೆಗಳು ಸೋರಿಕೆ: ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಭಾರತೀಯರಲ್ಲಿ ಆತಂಕ

ದೊಡ್ಡ ದಾಖಲೆಗಳ ಈ ಕಾಲದಲ್ಲಿ ಯಾರ ಮಾಹಿತಿಗಳು ಕೂಡ ಸುರಕ್ಷಿತವಾಗಿ ಉಳಿದಿಲ್ಲ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ದೊಡ್ಡ ದಾಖಲೆಗಳ ಈ ಕಾಲದಲ್ಲಿ ಯಾರ ಮಾಹಿತಿಗಳು ಕೂಡ ಸುರಕ್ಷಿತವಾಗಿ ಉಳಿದಿಲ್ಲ. ರಿಪಬ್ಲಿಕನ್ ನ್ಯಾಷನಲ್ ಸಮಿತಿಗೆ ಕೆಲಸ ಮಾಡುವ ಮಾರುಕಟ್ಟೆ ಕಂಪೆನಿಯಿಂದ ಅಮೆರಿಕಾದ ಅರ್ಧಕ್ಕೂ ಅಧಿಕ ಜನರ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿವೆ.
ಟೆಕ್ ನ್ಯೂಸ್ ವೆಬ್ ಸೈಟ್ ಗಿಜ್ಮೊಡೋ ನಡೆಸಿದ ವರದಿ ಪ್ರಕಾರ, ಅಮೆರಿಕಾ ಜನಸಂಖ್ಯೆಯ ಶೇಕಡಾ 62 ಭಾಗದಷ್ಟು ಮಂದಿಯ ಸೂಕ್ಷ್ಮ ಮಾಹಿತಿಗಳು ಮಾರ್ಕೆಟಿಂಗ್ ಕಂಪೆನಿಯಿಂದ ಆಕಸ್ಮಿಕವಾಗಿ ಬಹಿರಂಗಗೊಂಡಿದೆ. ಇದು ಅಮೆರಿಕಾದಲ್ಲಿ ಇದುವರೆಗೆ ವರದಿಯಾದ ಅತಿದೊಡ್ಡ ಚುನಾವಣಾ ದಾಖಲೆಗಳ ಸೋರಿಕೆಯಾಗಿದೆ.
ಭಾರತದಲ್ಲಿ ಆಧಾರ್ ಕಾರ್ಡ್ ನಲ್ಲಿನ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಹಲವರ ಪ್ರತಿಭಟನೆಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ   ಅಮೆರಿಕಾದಲ್ಲಿ ಕೂಡ ಮಾಹಿತಿ ಭಾರೀ ದೊಡ್ಡ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ.
ಅಮೆರಿಕಾದಲ್ಲಿ ಕಂಪೆನಿಗೆ ನೀಡಿದ ನಾಗರಿಕರ ವಿವರಗಳಲ್ಲಿ ವಿಳಾಸ, ಹುಟ್ಟಿದ ದಿನಾಂಕ, ದೂರವಾಣಿ ಸಂಖ್ಯೆ, ರಾಜಕೀಯ ಅಭಿಪ್ರಾಯ, ಗನ್ ಕಂಟ್ರೋಲ್, ಸ್ಟೆಮ್ ಸೆಲ್ ಸಂಶೋಧನೆ ಮತ್ತು ಗರ್ಭಪಾತದ ವಿವರಗಳನ್ನು ಹೊಂದಿದೆ. ಸೋರಿಕೆಯಾದ ವಿವರಗಳಲ್ಲಿ ಆಧಾರ್ ಸಂಖ್ಯೆ, ವಿಳಾಸ, ಎಲ್ ಪಿಜಿ ಸಂಪರ್ಕ ಮತ್ತು ದೂರವಾಣಿ ಸಂಖ್ಯೆಗಳನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com