ನಮ್ಮ ಸರ್ಕಾರ ಇಷ್ಟವಿಲ್ಲದಿದ್ದರೆ, ಪಿಂಚಣಿ, ರಸ್ತೆ ಬಳಸಬೇಡಿ; ಮತದಾರರಿಗೆ ಆಂಧ್ರಪ್ರದೇಶ ಸಿಎಂ

ನಮ್ಮ ಸರ್ಕಾರವನ್ನು ಇಷ್ಟ ಪಡೆದಿದ್ದರೆ, ಪಿಂಚಣಿ ಪಡೆಯಬೇಡಿ. ನಮ್ಮ ಸರ್ಕಾರ ನಿರ್ಮಿಸಿರುವ ರಸ್ತೆ, ಹೆದ್ದಾರಿಗಳನ್ನು ಬಳಕೆ ಮಾಡಬೇಡಿ ಎಂದು ಜನತೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುರುವಾರ...
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
Updated on
ಹೈದರಾಬಾದ್: ನಮ್ಮ ಸರ್ಕಾರವನ್ನು ಇಷ್ಟ ಪಡೆದಿದ್ದರೆ, ಪಿಂಚಣಿ ಪಡೆಯಬೇಡಿ. ನಮ್ಮ ಸರ್ಕಾರ ನಿರ್ಮಿಸಿರುವ ರಸ್ತೆ, ಹೆದ್ದಾರಿಗಳನ್ನು ಬಳಕೆ ಮಾಡಬೇಡಿ ಎಂದು ಜನತೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುರುವಾರ ಹೇಳಿದ್ದಾರೆ. 
ಕರ್ನೂರ್ ಜಿಲ್ಲೆಯ ನಂದ್ಯಾಲ್ ನಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಮ್ಮ ಸರ್ಕಾರ ನೀಡಿದ ಪಿಂಚಣಿ ಹಣವನ್ನು ಪಡೆಯುತ್ತೀರಿ, ನಮ್ಮ ಸರ್ಕಾರ ನಿರ್ಮಿಸಿದ ರಸ್ತೆಗಳನ್ನು ಬಳಕೆ ಮಾಡುತ್ತೀರಿ. ಆದರೆ, ನನಗೆ ಮತ ಹಾಕುವುದಿಲ್ಲ. ಇದು ಎಷ್ಟು ನ್ಯಾಯ? ಎಂದು ಪ್ರಶ್ನಿಸಿದ್ದಾರೆ. 
ನಿಮಗೆ ನಮ್ಮ ಸರ್ಕಾರ ಇಷ್ಟವಾಗದೇ ಹೋದರೆ, ನಾವು ನೀಡುತ್ತಿರುವ ಪಿಂಚಣಿ ಹಣವನ್ನು ಪಡೆಯಬೇಡಿ, ನಾವು ನಿರ್ಮಿಸಿರುವ ರಸ್ತೆ ಹಾಗೂ ಹೆದ್ದಾರಿಗಳನ್ನು ಬಳಕೆ ಮಾಡಬೇಡಿ. ಸರ್ಕಾರ ಜನರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಈ ಕುರಿತಂತೆ ಜನರಿಗೆ ಮಾಹಿತಿ ನೀಡಿ ಮತಗಳನ್ನು ಕೇಳಿ. ಒಂದು ವೇಳೆ ಅವರು ನಮಗೆ ಹಾಕುವುದಿಲ್ಲ ಎಂದು ಹೇಳಿದ್ದೇ ಆದರೆ, ಜನರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರೂ. ಯಾವ ಕಾರಣಕ್ಕೆ ಮತ ಹಾಕುವುದಿಲ್ಲ ಎಂದು ಪ್ರಶ್ನಿಸಿ ಎಂದು ಪಕ್ಷದ ನಾಯಕರಿಗೆ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. 
ಜನರು ನಮಗೆ ಮತಹಾಕದಿದ್ದರೂ ನಾವು ಅಂತಹ ಜನರನ್ನು ಹಾಗೂ ಗ್ರಾಮಗಳನ್ನು ತಿರಸ್ಕರಿಸುವುದಿಲ್ಲ. ಅವರಿಗಾಗಿ ನಾವು ಸದಾ ಕಾಲ ಉತ್ತಮ ಕೆಲಸಗಳನ್ನು ಮಾಡುತ್ತೇವೆ.ರೂ.1.50 ಲಕ್ಷವರೆಗಿನ ರೈತರ ಸಾಲವನ್ನು ನಾವು ಮನ್ನಾ ಮಾಡಿದ್ದೇವೆ. ಹಿರಿಯ ನಾಗರಿಕರಿಗೆ ಪಿಂಚಣಿ ನೀಡಿದ್ದೇವೆ. ವಿಕಲಚೇತನರಿಗೆ ರೂ.200 ರಿಂದ ರೂ.1000 ರವರೆಗೂ ಮಾಸಿಕ ಶುಲ್ಕವನ್ನು ನೀಡುತ್ತೇವೆ ಇದರಂತೆ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದರೂ, ಭ್ರಷ್ಟ ರಾಜಕೀಯ ನಾಯಕರು ನೀಡುವ ಹಣದ ಕಡೆ ಏಕೆ ವಾಲುತ್ತೀರಿ. ಅವರ ಪಕ್ಷಗಳಿಗೇಕೆ ಮತ ಹಾಕುತ್ತೀರಾ? ಅವರ ನೀಡುವ ರೂ.500 ಅಥವಾ ರೂ.1000 ಹಣ ನಿಮ್ಮ ಅದೃಷ್ಟವನ್ನು ಹೇಗೆ ಬದಲಾಯಿಸುತ್ತದೆ. 
ಕೆಲ ರಾಜಕೀಯ ಪಕ್ಷಗಳು ಮತದಾರರಿಗೆ ಹಣವನ್ನು ನೀಡುತ್ತಿದೆ. ಭ್ರಷ್ಟಾಚಾರ ಮೂಲಕ ಅವರು ಹಣವನ್ನು ಗಳಿಸಿದೆ, ನನಗೂ ಆ ಶಕ್ತಿಯಿದೆ. ಮತದಾರರಿಗೆ ನಾನೂ ರೂ.2,000 ಅಥವಾ ರೂ.5,000 ನೀಡಬಹುದು. ಆದರೆ, ಅದಕ್ಕಾಗಿ ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗಬೇಕಾಗುತ್ತದೆ. ಜನರ ಬಳಿ ನೂರು ಪಟ್ಟಿನಷ್ಟು ಲೂಟಿ ಮಾಡಬೇಕಾಗುತ್ತದೆ. ಆದರೆ, ನಾನೆಂದಿಗೂ ಅಂತಹ ಭ್ರಷ್ಟ ರಾಜಕೀಯದಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com