ಮುಂದಿನ ಪಿಎಸ್ಎಲ್ ವಿ ಉಡಾವಣಾ ರಾಕೆಟ್ ಬದಲಿ ಉಪಗ್ರಹ ಹೊತ್ತೊಯ್ಯಲಿದೆ: ಇಸ್ರೊ ಅಧ್ಯಕ್ಷ

ಸಂವಹನ ಉಪಗ್ರಹ ಜಿಸ್ಯಾಟ್ -17 ಈ ತಿಂಗಳ 28ರಂದು ಉಡಾವಣೆಗೊಳ್ಳಲಿದೆ ಎಂದು ಇಸ್ರೊ...
ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಮ್ಮ ತಂಡದೊಂದಿಗೆ
ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಮ್ಮ ತಂಡದೊಂದಿಗೆ
Updated on: 
ಶ್ರೀಹರಿಕೋಟಾ: ಸಂವಹನ ಉಪಗ್ರಹ ಜಿಸ್ಯಾಟ್ -17 ಈ ತಿಂಗಳ 28ರಂದು ಉಡಾವಣೆಗೊಳ್ಳಲಿದೆ ಎಂದು ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದ್ದಾರೆ. 
ಮುಂದಿನ ಪಿಎಸ್ಎಲ್ ವಿ ಉಡಾವಣೆ ಬದಲಿ ಉಪಗ್ರಹವನ್ನು ಹೊಂದಿದೆ. ಮೊದಲ ಉಪಗ್ರಹಗಳ ಒಂದು ಗಡಿಯಾರ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಹೀಗಾಗಿ ನಾವು ಅದನ್ನು ಬದಲಾಯಿಸಲು ನಿರ್ಧರಿಸಿದ್ದೇವೆ. ಅದಕ್ಕಿಂತಲೂ ಮೊದಲು ನಮ್ಮಲ್ಲಿ ಸಂವಹನ ಉಪಗ್ರಹ ಜಿಸ್ಯಾಟ್ -17 ನ್ನು ಉಡಾಯಿಸಲಾಗುವುದು ಎಂದು ಹೇಳಿದರು.
ಈ ವರ್ಷದ ಅಂತ್ಯಕ್ಕೆ ಜಿಸ್ಯಾಟ್-11 ನ್ನು ಉಡಾಯಿಸಲಾಗುವುದು. ಅಧ್ಯಯನ ತಂಡ ಮಾರ್ಸ್ ಆರ್ಬಿಟರ್ II, ವೀನಸ್ ಮತ್ತು ಕ್ಷುದ್ರಗ್ರಹ ಮಿಷನ್ ಮೇಲೆ ಕಾರ್ಯನಿರ್ವಹಿಸುತ್ತಿದೆ. ಕಾರ್ಯ ಯೋಜನೆ ಮುಗಿದರೆ ಸರ್ಕಾರದಿಂದ ಅನುಮತಿ ಪಡೆಯುತ್ತೇವೆ ಎಂದು ಹೇಳಿದರು.
ಅನುಮೋದಿತ ವಿಜ್ಞಾನ ಕಾರ್ಯಗಳಲ್ಲಿ ಆದಿತ್ಯ ಮತ್ತು ಚಂದ್ರಯಾನ II ಕೆಲಸಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. 
ಕಾರ್ಟೊಸಾಟ್-2 ಸರಣಿ ಉಪಗ್ರಹದ ಯಶಸ್ವಿ ಉಡಾವಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಇಸ್ರೊದ 40ನೇ ಯಶಸ್ವಿ ಪೋಲಾರ್ ಸ್ಯಾಟಲೈಟ್ ಉಡಾವಣಾ ವಾಹಕದ ಮೂಲಕ 31 ಸ್ಯಾಟಲೈಟ್ ಗಳ ಉಡಾವಣೆಗೆ ಅಭಿನಂದನೆಗಳು. ನೀವು ಭಾರತವನ್ನು ಹೆಮ್ಮೆ ಯ ದೇಶವಾಗಿಸಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿಯವರ ಕಚೇರಿ ಟ್ವಿಟ್ಟರ್ ಪುಟ ಕೂಡ ಇಸ್ರೊ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com