ಸಾಲ ಮನ್ನಾ ಕುರಿತು ವಿವಾದಾತ್ಮಕ ಹೇಳಿಕೆ: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದ ನಾಯ್ಡು

ರೈತರ ಸಾಲ ಮನ್ನಾ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿ ಹೋಗಿದೆ ಎಂಬ ಹೇಳಿಕೆ ನೀಡಿ ತೀವ್ರ ವಿರೋಧಕ್ಕೆ ಕಾರಣಕ್ಕೆ ಕಾರಣರಾಗಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ...
ನವದೆಹಲಿ: ರೈತರ ಸಾಲ ಮನ್ನಾ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿ ಹೋಗಿದೆ ಎಂಬ ಹೇಳಿಕೆ ನೀಡಿ ತೀವ್ರ ವಿರೋಧಕ್ಕೆ ಕಾರಣಕ್ಕೆ ಕಾರಣರಾಗಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಹೇಳಿದ್ದು ಆ ಅರ್ಥದಲ್ಲಿ ಅಲ್ಲ. ಕೆಲ ರಾಜಕೀಯ ಪಕ್ಷಗಳು ದೀರ್ಘಕಾಲಿಕವಾಗಿ ಅಲ್ಲದೆ, ಕೇವಲ ಕ್ಷಣಿಕ ಸಮಸ್ಯೆಗಳನ್ನು ನಿವಾರಿಸೊಳ್ಳುವ ಸಲುವಾಗಿ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿವೆ ಎಂಬ ಅರ್ಥದಲ್ಲಿ ಹೇಳಿದ್ದೆ ಎಂದು ಹೇಳಿದ್ದಾರೆ. 
ನನ್ನ ಹೇಳಿಕೆ ರಾಜಕೀಯ ಪಕ್ಷಗಳನ್ನು ಉದ್ದೇಶಿಸಿ ನೀಡಿದ ಹೇಳಿಕೆಯಾಗಿತ್ತು. ಅಲ್ಪಾವಧಿ ವಿಧಾನಗಳು, ನಿರ್ಧಾರಗಳನ್ನು ತೆಗೆದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿ ಹೋಗಿದೆ. ಅಳುವ ಮಕ್ಕಳಿಗೆ ಅಳುವುದನ್ನು ನಿಲ್ಲಿಸುವ ಸಲುವಾಗಿ ಲಾಲಿಪಾಪ್ ನೀಡಿದಂತಾಗಿ ಹೋಗಿದೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೆ ಎಂದು ತಿಳಿಸಿದ್ದಾರೆ. 
ಸರ್ಕಾರಗಳು ಮೂಲಭೂತ ಸೌಕರ್ಯ, ರೈತರ ಸಮಸ್ಯೆಗಳಾಗಿರುವ ಗೋದಾಮು, ಸಂಗ್ರಹಣೆ, ಕೃಷಿ ಗ್ರಾಮೀಣಕ್ಕೆ ರೆಫ್ರಿಜರೇಟರ್ ವ್ಯಾನ್ ಗಳಿ ಹೀಗೆ ನಾನಾ ರೀತಿಯ ಸಮಸ್ಯೆಗಳ ಕಡೆ ಗಮನ ಹರಿಸಬೇಕು. ಮೂಲಭೂತ ಸೌಕರ್ಯ ಹಾಗೂ ರೈತರ ಸಮಸ್ಯೆಗಳ ಕುರಿತಂತೆ ರಾಜಕೀ ಪಕ್ಷಗಳನ್ನುದ್ದೇಶಿಯಷ್ಟೇ ಹೇಳಿಕೆ ನೀಡಿದ್ದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com