10 ವರ್ಷಗಳಲ್ಲಿ ಶೇ.61 ರಷ್ಟು ಬೆಳವಣಿಗೆ ದಾಖಲಿಸಿದ ಭಾರತದ ಪತ್ರಿಕೆಗಳು: ಎಬಿಸಿ

ಜಾಗತಿಕವಾಗಿ ಪ್ರಿಂಟ್ ಮೀಡಿಯಾಗಿಂತ ವೆಬ್ ಮೀಡಿಯಾಗೆ ಹೆಚ್ಚು ಬೇಡಿಕೆ ಉಂಟಾಗುತ್ತಿದೆ. ಆದರೆ ಜಾಗತಿಕ ಟ್ರೆಂಡ್ ಗೆ ತದ್ವಿರುದ್ಧ ಎಂಬಂತೆ ಭಾರತದಲ್ಲಿ ಪ್ರಿಂಟ್ ಮೀಡಿಯಾಗೆ ಬೇಡಿಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಪ್ರಿಂಟ್...
ಪ್ರಿಂಟ್ ಮೀಡಿಯಾ
ಪ್ರಿಂಟ್ ಮೀಡಿಯಾ
ಚೆನ್ನೈ: ಜಾಗತಿಕವಾಗಿ ಪ್ರಿಂಟ್ ಮೀಡಿಯಾಗಿಂತ ವೆಬ್ ಮೀಡಿಯಾಗೆ ಹೆಚ್ಚು ಬೇಡಿಕೆ ಉಂಟಾಗುತ್ತಿದೆ. ಆದರೆ ಜಾಗತಿಕ ಟ್ರೆಂಡ್ ಗೆ ತದ್ವಿರುದ್ಧ ಎಂಬಂತೆ ಭಾರತದಲ್ಲಿ ಪ್ರಿಂಟ್ ಮೀಡಿಯಾಗೆ ಬೇಡಿಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಪ್ರಿಂಟ್ ಮೀಡಿಯಾ ಕಳೆದ 10 ವರ್ಷಗಳಲ್ಲಿ ಶೇ.61 ರಷ್ಟು ಬೆಳವಣಿಗೆ ಸಾಧಿಸಿದೆ. 
ಆಡಿಟ್ ಬ್ಯೂರೊ ಆಫ್ ಸರ್ಕ್ಯುಲೇಷನ್ಸ್ ನ ಅಂಕಿ-ಅಂಶಗಳ ಪ್ರಕಾರ, 2006 ರಲ್ಲಿ 3.91 ಕೋಟಿಯಷ್ಟಿದ್ದ ಪ್ರತಿ ದಿನದ ಪತ್ರಿಕೆಗಳ ಸರಾಸರಿ ಮಾರಾಟ, 2016 ರಲ್ಲಿ 6.28 ಕೋಟಿಗೆ ಏರಿಕೆಯಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಪತ್ರಿಕೆಗಳ ಮಾರಾಟದ ಬಗ್ಗೆ ಅಂಕಿ-ಅಂಶಗಳನ್ನು ಎಬಿಸಿ ಬಿಡುಗಡೆ ಮಾಡುತ್ತದೆ. ಎಬಿಸಿ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಮುದ್ರಿತ ಪತ್ರಿಕೆಗಳ ಮಾರಾಟ ಅತ್ಯುತ್ತಮವಾಗಿ ಬೆಳವಣಿಗೆಯಾಗುತ್ತಿದ್ದು, ಕಳೆದ 10 ವರ್ಷಗಳಲ್ಲಿ ಸಿಎಜಿಆರ್ ಶೇ.4.87 ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಲಾಗುತ್ತಿದೆ. 
ಪ್ರಸಕ್ತ ಸಾಲಿನಲ್ಲಿ ಸಿಎಜಿಆರ್ ಬೆಳವಣಿಗೆ ಶೇ.7.83 ರಷ್ಟಿದ್ದು, ದಕ್ಷಿಣದಲ್ಲಿ ಶೇ.4.95 ರಷ್ಟಿದೆ. ಪ್ರಾದೇಶಿಕ ಪತ್ರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ದರ ಸಾಧ್ಯವಾಗಿದ್ದು, ಹಿಂದಿ ಮಾಧ್ಯಮಗಳು ಜಿಎಜಿಆರ್ ಶೇ.8.76 ರಷ್ಟು ಬೆಳವಣಿಗೆ ಹೊಂದುವ ಮೂಲಕ ಅಗ್ರಸ್ಥಾನದಲ್ಲಿವೆ. ತೆಲುಗು ಶೇ.8.28 ರಷ್ಟನ್ನು ಹೊಂದಿದ್ದು 2 ನೇ ಸ್ಥಾನದಲ್ಲಿದೆ ಎಂದು ಎಬಿಸಿ ಅಂಕಿ-ಅಂಶ ಹೇಳಿದೆ. 
ಇನ್ನು ಇಂಗ್ಲೀಷ್ ಪತ್ರಿಕೆಗಳು ಶೇ.2.87 ರಷ್ಟು ಬೆಳವಣಿಗೆ ದಾಖಲಿಸಿದರೆ. 2020 ರ ವೇಳೆಗೆ ಟಿವಿ ಮೊದಲ ಸ್ಥಾನದಲ್ಲಿದ್ದರೂ ಪತ್ರಿಕೆಗಳು 2 ನೇ ದೊಡ್ಡ ಸ್ಥಾನದಲ್ಲಿ ಮುಂದುವರೆಯಲಿದ್ದು, 2021 ರ ವೇಳೆಗೆ ಪತ್ರಿಕೆಗಳ ಸಿಎಜಿಆರ್ ಶೇ.7.3 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಎಬಿಸಿ ಅಂದಾಜಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com