ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಖ್ಯಾತ ಪ್ರವಾಸಿ ತಾಣ ಗುಲ್ಮಾರ್ಗ್ ನ ಕೇಬಲ್ ಕಾರ್ ಮೇಲೆ ಮರ ಬಿದ್ದು ಐದು ಸಾವು!

ವಿಶ್ವವಿಖ್ಯಾತ ಪ್ರವಾಸಿ ತಾಣ ಗುಲ್ಮಾರ್ಗ್ ನಲ್ಲಿನ ಕೇಬಲ್ ಕಾರ್ ಮೇಲೆ ಮರ ಬಿದ್ದ ಪರಿಣಾಮ ಅದರೊಳಗಿದ್ದ ಐದು ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಶ್ರೀನಗರ: ವಿಶ್ವವಿಖ್ಯಾತ ಪ್ರವಾಸಿ ತಾಣ ಗುಲ್ಮಾರ್ಗ್ ನಲ್ಲಿನ ಕೇಬಲ್ ಕಾರ್ ಮೇಲೆ ಮರ ಬಿದ್ದ ಪರಿಣಾಮ ಅದರೊಳಗಿದ್ದ ಐದು ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಗುಲ್ಮಾರ್ಗ್ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಸುಪ್ರಸಿದ್ದ ಪ್ರವಾಸಿ ತಾಣವಾಗಿದ್ದು, ಗುಡ್ಡದ ತುದಿ ತಲುಪುವನ ಕೇಬಲ್ ಕಾರ್ ಕಾರ್ ಕೂಡ ಪ್ರಮುಖ ಆಕರ್ಷಣೆಯಾಗಿದೆ. ಆದರೆ ಇಂದು ಇದೇ ಕೇಬಲ್ ಕಾರ್ ಮೇಲೆ ಬಿರ ಬಿದ್ದ  ಪರಿಣಾಮ ಕೇಬಲ್ ಕಾರ್ ನಲ್ಲಿದ್ದ ಐದು ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಎರಡು ಕೇಬಲ್ ಕಾರ್ ಗಳ ನಡುವಿನ ಕೇಬಲ್ ಮೇಲೆ ಮರ ಬಿದ್ದಿದ್ದು, ಈ ವೇಳೆ ತಂತಿ ತುಂಡರಿಸಿದೆ. ಹೀಗಾಗಿ ಕೂಡಲೇ  ಕೇಬಲ್ ಕಾರ್ ಪ್ರಪಾತಕ್ಕೆ ಬಿದ್ದಿದ್ದು, ಆದರೊಳಗಿದ್ದ ಐದು ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ಪ್ರಸ್ತುತ ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇನ್ನು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಪ್ರವಾಸಿ ತಾಣ ಸ್ಕೀಯಿಂಗ್ ನೆಚ್ಚಿನ ತಾಣವಾಗಿದ್ದು, ಪ್ರತೀ ವರ್ಷ ಇಲ್ಲಿಗೆ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಬೇಸಿಗೆಯಲ್ಲಿ ಪ್ರವಾಸಿಗರ ಸಂಖ್ಯೆ  ಹೆಚ್ಚಾಗಿದ್ದು, ಚಳಿಗಾಲದಲ್ಲಿ ಮಂಜು ಹೆಚ್ಚಾಗಿರುವುದರಿಂದ ಟ್ರಕಿಂಗ್ ಮಾಡಲು ಮತ್ತು ಸ್ಕೀಯಿಂಗ್ ಮಾಡಲು ಪ್ರವಾಸಿಗರು ಆಗಮಿಸುತ್ತಾರೆ. ಇಡೀ ವಿಶ್ವದಲ್ಲೇ ಅತ್ಯಂತ ಸುಂದರ ಮತ್ತು ಸ್ಕೀಯಿಂಗ್ ಸೂಕ್ತಯವಾದ ಸ್ಲೋಪ್ಸ್ ಗಳು  ಗುಲ್ಮಾರ್ಗ್ ನಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com