ರಾಷ್ಟ್ರಪತಿ ಚುನಾವಣೆಯು ಮಹಾತ್ಮ ಗಾಂಧಿ 'ಸಿದ್ಧಾಂತ' ಎತ್ತಿಹಿಡಿಯಲು ಒಂದು ಕದನ: ಮೀರಾ ಕುಮಾರ್

ಮಹಾತ್ಮಗಾಂಧೀಜಿಯವರ ಸಿದ್ಧಾಂತಗಳನ್ನು ಎತ್ತಿಹಿಡಿಯಲು ರಾಷ್ಟ್ರಪತಿ ಚುನಾವಣೆಯೊಂದು ಕದನವಾಗಿದೆ ಎಂದು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ...
ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್
ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್
ಅಹ್ಮದಾಬಾದ್: ಮಹಾತ್ಮಗಾಂಧೀಜಿಯವರ ಸಿದ್ಧಾಂತಗಳನ್ನು ಎತ್ತಿಹಿಡಿಯಲು ರಾಷ್ಟ್ರಪತಿ ಚುನಾವಣೆಯೊಂದು ಕದನವಾಗಿದೆ ಎಂದು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ. 
ರಾಷ್ಟ್ರಪತಿ ಚುನಾವಣೆ ಹತ್ತಿರಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡುವ ಮೂಲಕ ಪ್ರಚಾರ ಕಾರ್ಯವನ್ನು ಆರಂಭಿಸಿರುವ ಮೀರಾ ಕುಮಾರ್ ಅವರು, ಈ ಭಾಗದ ಜನರು ಶೀಘ್ರಗತಿಯಲ್ಲಿ ಅಭಿವೃದ್ಧಿಯನ್ನು ಕಾಣಲಿ ಎಂದು ಆಶಿಸುತ್ತೇನೆ. 
ದೇಶ ಹಾಗೂ ವಿಶ್ವದಲ್ಲಿ ಈ ರೀತಿಯ ಬೆಳವಣೆಗಳಾಗಬೇಕೆಂದೇ ಗಾಂಧೀಜಿಯವರು ಬಯಸಿದ್ದರು. ಪ್ರಸ್ತುತ ನಾನು ನಡೆಸುತ್ತಿರುವ ಹೋರಾಟ ಮಹಾತ್ಮ ಗಾಂಧೀಜಿಯವರ ಸಿದ್ಧಾಂತಗಳನ್ನು ಎತ್ತಿಹಿಡಿಯುವ ಸಲುವಾಗಿದೆ.  ನನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನಾನಿಲ್ಲಿಗೆ ಬಂದಿದ್ದೇನೆಂದು ಹೇಳಿದ್ದಾರೆ. 
ಜುಲೈ.17ರಂದು ನಡೆಯಲಿದ್ದು, ಈಗಾಗಲೇ ಆಡಳಿತಾರೂಢ ಎನ್ ಡಿಎ ಪಕ್ಷದ ಅಭ್ಯರ್ಥಿ ರಾಮನಾಥ್ ಕೋವಿಂದ್ ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚುನಾವಣೆಯಲ್ಲಿ ಕೋವಿಂದ್ ಹಾಗೂ ಮೀರಾ ಕುಮಾರ್ ಅವರ ನಡುವೆ ನೇರ ಹಣಾಹಣಿ ನಿರೀಕ್ಷಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com