ವಾರಣಾಸಿಯಲ್ಲಿ ಪ್ರೆಂಚ್ ಮಹಿಳೆ ಮೇಲೆ ಅತ್ಯಾಚಾರ: ವಾಚ್ ಮನ್ ಬಂಧನ

65 ವರ್ಷದ ಪ್ರೆಂಚ್ ಮಹಿಳೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಾರಣಾಸಿಯಲ್ಲಿ ವಾಚ್ ಮನ್ ನನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾರಣಾಸಿ: 65 ವರ್ಷದ ಪ್ರೆಂಚ್ ಮಹಿಳೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಾರಣಾಸಿಯಲ್ಲಿ ವಾಚ್ ಮನ್ ನನ್ನು ಬಂಧಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ  ವಾಸವಾಗಿದ್ದ  ಸಮಾಜಸೇವಾ ಕಾರ್ಯಕರ್ತೆಯನ್ನು ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಚ್‌ ಮನ್‌ ಓಂ ಪ್ರಕಾಶ್‌ ಎಂಬಾತನನ್ನು ಮಿರ್ಜಾಪುರ ಜಿಲ್ಲೆಯಲ್ಲಿನ ಆತನ ಸಹೋದರನ ಮನೆಯಿಂದ ಬಂಧಿಸಲಾಗಿದೆ. 
ಶೂಲತಾನಕೇಶ್ವರ ಪ್ರದೇಶದಲ್ಲಿ ಸಂತ್ರಸ್ತೆಯು ವಾಸವಾಗಿದ್ದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದ ವಾಚ್‌ ಮನ್‌ ಓಂ ಪ್ರಕಾಶ್‌, ಬುಧವಾರ ರಾತ್ರಿ ಫ್ರೆಂಚ್‌ ಮಹಿಳೆಯು ಮಲಗಿಕೊಂಡಿದ್ದಾಗ ಆಕೆಯ ಕೋಣೆಯನ್ನು ಮೆಲ್ಲಗೆ ಪ್ರವೇಶಿಸಿದ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆ ಇದಕ್ಕೆ ಪ್ರತಿರೋಧಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಕಳೆದ ಹತ್ತು ವರ್ಷಗಳಿಂದ ವಾರಾಣಸಿಗೆ ಕ್ರಮಬದ್ಧವಾಗಿ ಭೇಟಿ ನೀಡುತ್ತಿರುವ ಫ್ರೆಂಚ್‌ ಮಹಿಳೆಯು ಇಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಹಿಳೆಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com