ಉತ್ತರಪ್ರದೇಶದಲ್ಲಿ 3 ಪ್ರತ್ಯೇಕ ಘರ್ಷಣೆ: 25 ಜನರಿಗೆ ಗಾಯ

ಉತ್ತರಪ್ರದೇಶದ ಮುಜಾರ್'ಫರ್ ನಗರದ ಹಾಗೂ ಶಾಮ್ಲಿ ಜಿಲ್ಲೆಗಳಲ್ಲಿ ಮೂರು ಪ್ರತ್ಯೇಕ ಘರ್ಷಣೆಗಳು ಏರ್ಪಟ್ಟು 25 ಜನರಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಜಾಫರ್ ನಗರ: ಉತ್ತರಪ್ರದೇಶದ ಮುಜಾರ್'ಫರ್ ನಗರದ ಹಾಗೂ ಶಾಮ್ಲಿ ಜಿಲ್ಲೆಗಳಲ್ಲಿ ಮೂರು ಪ್ರತ್ಯೇಕ ಘರ್ಷಣೆಗಳು ಏರ್ಪಟ್ಟು 25 ಜನರಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ. 
ಬೀದಿ ಕಾಮಣ್ಣರು ಯುವತಿಯರನ್ನು ಚುಡಾಯಿಸಿದ್ದ ಕಾರಣಕ್ಕೆ ಮುಜಾಫರ್ ನಗರದ ಹಶೀಂಪುರ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ 13 ಮಂದಿ ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಮೆಹ್ತಾಬ್ ಮತ್ತು ಅಶು ಎಂಬ ಯುವಕರು ಯುವತಿಗೆ ಚುಡುಯಿಸಿದ್ದ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆ ವೇಳೆ ಕೆಲವು ಶಸ್ತ್ರಾಸ್ತ್ರಗಳನ್ನು ತಂದಿದ್ದರು. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಘರ್ಷಣೆ ಬಳಿಕ ಗ್ರಾಮದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 
ಶಾಮ್ಲಿಯ ನಾಲಾ ಗ್ರಾಮದಲ್ಲೂ ಯುವಕರ ಗುಂಪೊಂದು ಯುವತಿಗೆ ಚುಡಾಯಿಸಿದ್ದ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಘಟನೆಯಲ್ಲಿ 6 ಮಂದಿಗೆ ಗಾಯಗಳಾಗಿವೆ. ಘರ್ಷಣೆ ಸಂಭವಿಸುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. 
ಮತ್ತೊಂದು ಘಟನೆ ಮುಜಾಫರ್ ನಗರದ ಕರೋಲಿ ಗ್ರಾಮದಲ್ಲಿ ನಡೆದಿದ್ದು, ಕೊಳಚೆ ನೀರನ್ನು ಮಗುವಿನ ಮೇಲೆ ಹಾಕಿದ್ದ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು 6 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com