ಗುಜರಾತ್: ಕಾಡಿನಲ್ಲಿ 12 ಸಿಂಹಗಳ ಮಧ್ಯೆ ಗಂಡು ಮಗುವಿಗೆ ಜನ್ಮವಿತ್ತ ತಾಯಿ

ಸಿಂಹಗಳ ಘರ್ಜನೆ ನಡುವೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಗುಜರಾತಿನಲ್ಲಿ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಹಮದಾಬಾದ್: ಸಿಂಹಗಳ ಘರ್ಜನೆ ನಡುವೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಗುಜರಾತಿನಲ್ಲಿ ನಡೆದಿದೆ.
ಜೂನ್ 29 ರ ಮಧ್ಯರಾತ್ರಿ, ಲುನಾಸಾಪುರ ಎಂಬ ಗ್ರಾಮದ ಮಂಗೂಬೆನ್ ಮಕ್ವಾನ್ ಎಂಬ ಮಹಿಳೆಗೆ ಗುರುವಾರ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ 108 ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಜಫರಾಬಾದ್ ಪಟ್ಟಣದಲ್ಲಿರುವ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲು ಕರೆದೊಯ್ದಿದ್ದಾರೆ.
ಕರೆದೊಯ್ಯುವ ಮಾರ್ಗ ಮಧ್ಯೆ ಗಿರ್ ಅರಣ್ಯಪ್ರದೇಶದ ಹಾದಿಯಲ್ಲಿ ಆಕೆಗೆ ಹೆರಿಗೆ ನೋವು ಜಾಸ್ತಿಯಾಗಿದೆ. ಈ ವೇಳೆ ತುರ್ತು ನಿರ್ವಹಣ ತಂತ್ರಜ್ಞ ಅಶೋಕ್ ಆಕೆಗೆ ಯಾವುದೇ ಸಮಯದಲ್ಲಾದರೂ ಹೆರಿಗೆಯಾಗಬಹುದು ಎಂಬುದನ್ನು ಅರಿತು ಆಂಬುಲೆನ್ಸ್ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ. 
ನಂತರ ಅಶೋಕ್ ಫೋನ್ ಮುಖಾಂತರ ವೈದ್ಯರ ಮಾರ್ಗದರ್ಶನ ಪಡೆಯುವ ವೇಳೆ ಸುಮಾರು 12 ಸಿಂಹಗಳು ಆ್ಯಂಬುಲೆನ್ಸ್ ಅನ್ನು ಸುತ್ತುವರಿದಿವೆ, ಸುಮಾರು 20 ನಿಮಿಷಕ್ಕೂ ಹೆಚ್ಚು ಹೊತ್ತು ರಸ್ತೆ ಮಧ್ಯ ನಿಂತು ಸಿಂಹಗಳು ಘರ್ಜಿಸಿವೆ. ಆದರೆ ಸಿಬ್ಬಂದಿ ಹೆದರದೇ ಮಹಿಳೆಗೆ ಸುಮಾರು 2.30j ವೇಳೆಗೆ ಹೆರಿಗೆ ಮಾಡಿದ್ದಾರೆ. ಮಹಿಳೆ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
ನಂತರ ಆ್ಯಂಬುಲೆನ್ಸ್ ಚಾಲಕ ನಿಧಾನವಾಗಿ ವಾಹನವನ್ನು ಚಲಾಯಿಸಿದ್ದಾನೆ. ಈ ವೇಳೆ ಸಿಂಹಗಳು ಯಾವುದೇ ತೊಂದರೆ ನೀಡದೆ ದಾರಿ ಬಿಟ್ಟುಕೊಟ್ಟಿವೆ. ನಂತರ ಮಹಿಳೆ ಮತ್ತು ಮಗುವನ್ನು ಜಫರಾಬಾದ್ ಆಸ್ಪತ್ರೆಗೆ ದಾಖಲಿಸಾಗಿದೆ. ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com